೧
ಹಸಿರು ನೋಡಿದ ಮೇಲೆ
ನೀಲಿ ನಭದ ಕೆಳಗೆ
ಪಟಪಟನೆ ಬಡಿದ ರೆಕ್ಕೆ...
ಹುಚ್ಚೀ,
ಕವಿತೆ ಬರೆವುದು ಹಾಗಲ್ಲ
ಕೈಯಲ್ಲಿ ಪೆನ್ನು
ಸ್ವಚ್ಛ ಬಿಳಿ ಹಾಳೆ
ಶಬ್ದ ಸ್ಖಲಿಸಿದಾಕ್ಷಣ
ಕವಿತೆ ಹುಟ್ಟುವುದಿಲ್ಲ
ಸಾಲಲ್ಲೊಂದು ಮಿಂಚು
ತಾಕಿದರೆ ಸಾಕು ಎದೆಯಂಚು
ಅಲ್ಲಲ್ಲಿ ಇಣುಕುವ ಪದ
ಗಳಿಗಿರಲಿ ನೆನಪಿನ
ಒನಪು ವೈಯಾರ
ಅಲ್ಲಲ್ಲಿ ನಿಂತು, ಕೆಲವೊಮ್ಮೆ ಓಡಿ
ನುಗ್ಗಿ, ಮುನ್ನುಗ್ಗಿ ಭೋರ್ಗರೆವ
ಭಾವನೆಗಳ ಹರಿವಿರಲಿ
ಶಾಂತ ಸರಸ್ಸಿನ ಗಾಂಭೀರ್ಯ ನೆನಪಿರಲಿ
ಎಷ್ಟೆಲ್ಲಾ ಬರೆದ ಮೇಲೂ
ಕವಿತೆ ಕವಿಯ ಸ್ವತ್ತಲ್ಲ
ನಿನ್ನೆ ಬರೆದ ಕವಿತೆ
ನಾಳೆಗಿರುವುದಿಲ್ಲ
೨
ಶಬ್ದ, ಪ್ರತಿಶಬ್ದ
ಬಿಂಬ, ಪ್ರತಿಬಿಂಬ
ಚಿನ್ಹೆ, ಪ್ರಶ್ನೆಗಳ ಮಧ್ಯೆ
ಕಳೆದು ಹೋದೀಯ ಎಚ್ಚರ
ಗೆಳತೀ,
ಬದುಕೆಂಬುದು ಕವಿತೆ ಬರೆದಂತಲ್ಲ
"ಕವಿತೆ ಬರೆವುದು ಹಾಗಲ್ಲ......"
ReplyDeleteಅಂತ ಹೇಳುತ್ತಲೆ ಸೊಗಸಾದ ಕವಿತೆ ಹೆಣೆದಿದ್ದೀರ.....
ಚೆನ್ನಾಗಿದೆ....
Wonderful Anand...
ReplyDeleteಆನಂದ... :) ಸೂಪರ್ ಆಗಿ ಇದೆ...
ReplyDeleteನಿಮ್ಮವ,
ರಾಘು.
ಆನಂದ..
ReplyDeleteಕವಿತೆ ಬರೆಯೋದ್ರಲ್ಲಿ ಮೈ ಮರೆತು ಬದುಕೋದನ್ನೇ ಮರೆತು ಬಿಡ್ಬೇಡ.. ಬದುಕು ಕವಿತೆ ಬರೆದಂತೆ ಅಲ್ಲ ಅಂತ ಹೇಳ್ತಾನೇ ಒಂದು ಸುಂದರ ಕವಿತೆ ಬರೆದಿದ್ದೀರಾ.. ನಿನ್ನೆ ಬರೆದ ಕವಿತೆ.. ನಾಳೆಗಿರುವದಿಲ್ಲ...!! ನಿಜವಾದ ಮಾತು... ಬರೆಯೋವರೆಗೆ ಮಾತ್ರ ಕವಿತೆ ಕವಿಯದ್ದು.. ನಂತರ ಅದು ಬೇರೆಯವರ ಸ್ವತ್ತು... ತುಂಬಾ ಚೆನ್ನಾಗಿದೆ... :)
ಆನಂದ್, ಚನ್ನಾಗಿವೆ ಸಾಲುಗಳು
ReplyDeleteಎಷ್ಟೆಲ್ಲಾ ಬರೆದ ಮೇಲೂ
ಕವಿತೆ ಕವಿಯ ಸ್ವತ್ತಲ್ಲ
ನಿನ್ನೆ ಬರೆದ ಕವಿತೆ
ನಾಳೆಗಿರುವುದಿಲ್ಲ
ಮೈ ಪಲ್ ದೋ ಪಲ್ ಕಾ ಶಾಯರ್ ಹೂಂ ಎನ್ನುವ ಹಳೆಯ ಕಭಿ-ಕಭಿ ಚಿತ್ರದ ಗೀತೆ ನೆನಪಿಗೆ ಬರುತ್ತೆ...
tumba ishtavaaytu ee kavite.. over all blog lekanagaloo mastagive..
ReplyDelete