ಪೇಟೆ ಬೀದಿಗಳಲ್ಲಿ
ಊರ ಸಂತೆಯಲಿ
ಕಳೆದುಹೋದ ಕವಿತೆಯ
ಕೂಗು ಯಾರಿಗೂ ಕೇಳುತ್ತಿಲ್ಲ
ಯಾರಿಗೆ ಹುಟ್ಟಿದ್ದು?
ಕದ್ದು ತಂದ ಸಾಲಿಗೋ
ಜೀವ ತುಂಬಿದ ಶಬ್ದಕ್ಕೋ
ಕವಿತೆಗೆ ಹೆಸರೇ ನೆನಪಿಲ್ಲ
ಸಂತೆ ಮಧ್ಯದಲಿ ನಿಂತು
ಹರಾಜಿಗಿದೆ ಕವಿತೆ
ಮೂಸುವವರೂ ಗತಿಯಿಲ್ಲ
ಗಲ್ಲಿ ಗಲ್ಲಿ ತಿರುಗಿದರೂ
ಎಲ್ಲ ಮನೆಗಳಿಗೂ ಬಣ್ಣ ಒಂದೇ
ಬಾಗಿಲ ಗುರುತೇ ಸಿಕ್ಕುತ್ತಿಲ್ಲ
ನೀರಿಲ್ಲದೇ, ಬಾಳಿಲ್ಲದೇ
ಸುಡುಗಾಡಲ್ಲುರುಳಿದೆ ಕವಿತೆ
ಜವರಾಯನಿಗೆ ಬಿಡುವಿಲ್ಲ
ನಿಮ್ಮದು ಬರೇ ಜಾವಾ ಪರ್ಪಂಚವಲ್ಲ ಆನಂದ.... ಭಾವ ಪರ್ಪಂಚ...
ReplyDeleteಇಂತ ಘಮ ಘಮ ಕವಿತೆ ಬರೀತಿದ್ರೆ ಮೂಸುವ, ಸುಗಂಧ ಸವಿಯುವ ದುಂಬಿಗಳ ದಂಡೇ ನೆರೆಯುತ್ತದೆ ಬಿಡಿ..
ಅದ್ಭುತವಾಗಿದೆ.. ಮತ್ತೊಮ್ಮೆ ಇಷ್ಟವಾದದ್ದು... ಪದಗಳ ಬಳಕೆ...
ನಿಮ್ಮಆಕ್ರಂದನೆ ತುಂಬಾ ಚನ್ನಾಗಿದೆ ರೀ...
ReplyDeletei mean, ನಿಮ್ಮ ಕವಿತೆ ತುಂಬಾ ಚನ್ನಾಗಿದೆ... :)
nice:) :)
ReplyDelete@ದಿಲೀಪ್ ಹೆಗಡೆ
ReplyDeleteಜಾವಕ್ಕೂ ಭಾವಕ್ಕೂ ಗಂಟು ಹಾಕಿದ್ದೀರಾ.... :)
ಜಾವದಲ್ಲಿ ಬರೆದು ಬರೆದೂ ಬೇಜಾರಾದಾಗ ಒಂದಿಷ್ಟು ಗೀಚುತ್ತೀನಿ.
ನಿಮಗಿಷ್ಟವಾದರೆ ಅಷ್ಟೇ ಖುಷಿ!
@ಶಿವಪ್ರಕಾಶ್
ನನ್ನ ಕೂಗು ನಿಮ್ಮನ್ನ ಮುಟ್ಟಿದ್ದಕ್ಕೆ ಖುಷಿಯಾಯ್ತು :)
@ಗೌತಮ್ ಹೆಗಡೆ
ಮೆಚ್ಚಿದ್ದಕ್ಕೆ ಧನ್ಯವಾದಗಳು :P