ತಿಳಿಗತ್ತಲಲಿ ಸುಳಿಗಾಳಿಗೆ ಸಿಕ್ಕು
ತರುಗೆಲೆಯೊಂದು ಹಾರಿತ್ತು
ಮಲಗಿದ್ದ ಕೊಳಕ್ಕೆ ಮೆಲ್ಲನೆ ಮುತ್ತಿಕ್ಕೆ
ಅಲೆಯೊಂದು ಬೆದರಿತ್ತು
ಅದುರಿದಾ ಕೊಳದಲ್ಲಿ
ಚಂದಿರನು ಬೆಚ್ಚಿದ್ದ
ಮೆಲ್ಲನೆ ಹೊರಳಾಡಿ
ಮತ್ತದೋ ಮಲಗಿದ್ದ
ಆ ದೃಶ್ಯಕ್ಕೆ ಬೆರಗಾದೆ
ಕತ್ತಲಿಗೆ ಮರುಳಾದೆ
ಆ ಕೊಳದ ಬಳಿ
ಆ ಬಿದಿರು ಮೆಳೆ
ನನ್ನ ಭಾವವನ್ನೊಮ್ಮೆ ತೂಗಾಡಿತು
ನಿಸರ್ಗದ ಯಾವುದೇ ಪುಟ್ಟ ಕ್ರಿಯೆಯೂ ಸೊಬಗನ್ನು ಬೀರಿ ನಮ್ಮಲ್ಲಿಯೂ ಸಹ ಭಾವತರಂಗವನ್ನು ಸ್ಫುರಿಸಬಹುದು. ನಿಮ್ಮ ಕವನ ಈ ವಿಷಯವನ್ನು ಸೊಗಸಾಗಿ ಅಭಿವ್ಯಕ್ತಿಸಿದೆ.
ReplyDeleteಸುನಾಥ ಕಾಕಾ,
ReplyDeleteಆ ಸಮಯದಲ್ಲಿ ನನ್ನಲ್ಲಿ ಮೂಡಿದ ಭಾವನೆಗಳನ್ನ ಅಕ್ಷರದಲ್ಲಿ ಹಿಡಿಯೋ ಪ್ರಯತ್ನ ಮಾಡಿದ್ದೇನಷ್ಟೇ.
ಹಿಡಿತಕ್ಕೆ ಸಿಗಲೊಪ್ಪದ ಭಾವನೆಗಳು ಅನೇಕ ಹಾಗೇ ಉಳಿದುಬಿಟ್ಟಿವೆ. ಹಾಗಾಗಿಯೇ ಅವು ನನಗೆ ಮತ್ತೂ ಇಷ್ಟ :)