Friday, November 20, 2009

ಬಟ್ಟಲುಗಣ್ಣಲ್ಲಿ ಚಂದ್ರಬಿಂಬ

ನಟ್ಟಿರುಳು ಕನಸಿನಲಿ
ಚಂದಿರನು ಕಂಡಿಲ್ಲ

ತಾರೆಗಳು ದಿಗಿಲು
ಪ್ರಿಯಕರನ ಸುಳಿವಿಲ್ಲ

ಸುರಗಾನದ ಅಲೆಯಿಲ್ಲ
ರಸೆಯೊಳಗೆ ಕಳೆಯಿಲ್ಲ
ಚಂದಿರನು ಸಿಕ್ಕಿಲ್ಲ

ಊರೆಲ್ಲಾ ಹುಡುಕಾಡಿ
ಬಾಂದಳವ ತಡಕಾಡಿ
ಇವಳ ಬಳಿ ಬರಲು

ತುಸು ನಾಚಿ, ಬಳಿ ಸರಿದು
ಬಟ್ಟಲುಗಣ್ಣಿನ ಹುಡುಗಿ
ಬೊಗಸೆ ನೀರಲ್ಲಿ ಚಂದ್ರನ ತೋರಿಸಿದಳು

10 comments:

  1. ಆಹಾಹಾಹಾ... ಅದ್ಭುತ... ಅಂಗೈನಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ಅಲೆದೋರ ಹಾಗಾಯ್ತು ಸ್ಥಿತಿ...
    ಕವನ, ಪದಗಳ ಜೋಡಣೆ, ಸಾಲುಗಳಲ್ಲಿ ಬೆರೆಸಿದ ಭಾವನೆ... ವಾವ್... ಸುಂದರವಾಗಿದೆ.. :)

    ReplyDelete
  2. ಆನಂದ,
    ನಿಮ್ಮ ಬಟ್ಟಲುಗಣ್ಣಲ್ಲಿ ನಿನ್ನವಳು ನಗುವ ಬಿಂಬ ಸುಂದರ... ಸುಂದರ...
    ನಿಮ್ಮವ,
    ರಾಘು.

    ReplyDelete
  3. ಶುಂಠಿ-ಸುಡಗಾಡಲ್ಲೂ ಕಂಪುಬೀರೋ ಕವನದ ಮಲ್ಲಿಗೆ ಅರಳ್ತಿದೆ ಅಂದ್ರೆ....ಆನಂದಾನೇ..ಆನಂದ...ಅಲ್ವೇ..ಆನಂದ್
    ಬಹಳ ಮುದ್ದಾದ್ ಸಾಲುಗಳು..
    ಎರಡ್ನೇ ಸಾಲಿಗೆ ನಾಲ್ಕನೇ ಸಾಲಿನ ಚಂದಿರ - ಪ್ರಿಯಕರನ comparision.

    ReplyDelete
  4. ತುಂಬಾ ಚೆನ್ನಾಗಿದೆ, ಕವಿತೆ ಹಾಡಿಕೊಳ್ಳಬಹುದು
    ಒಳ್ಳೆಯ ಸಾಲುಗಳು

    ReplyDelete
  5. @ದಿಲೀಪ್ ಹೆಗಡೆ
    ನಿಮಗಿಷ್ಟವಾಗಿದ್ದಕ್ಕೆ ಖುಶಿಯಾಯ್ತು

    @Raghu said
    ನನ್ನವಳು, ನನ್ನಮನವನ್ನಾಳುವವಳು ಇನ್ನೂ ಸಿಕ್ಕಿಲ್ಲ.
    ಏನೋ, ನಿಮ್ಮ ಹಾರೈಕೆಯಿಂದ...... :)

    @ಜಲನಯನ
    ಸುಡುಗಾಡಲ್ಲೂ ಕಂಪನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು

    @ಗೌತಮ್ ಹೆಗಡೆ
    @ಮಲ್ಲಿಕಾರ್ಜುನ.ಡಿ.ಜಿ.
    @ಸಾಗರದಾಚೆಯ ಇಂಚರ

    ಮೆಚ್ಚಿದ್ದಕ್ಕೆ ಧನ್ಯವಾದಗಳು

    ReplyDelete
  6. ಬೊಗಸೆ ನೀರಲ್ಲಿ ಚಂದ್ರನ ತೋರಿಸಿದಳು...!!!

    ಯಾರೋ ಅವಳು???

    Wonderful wording!!!

    ReplyDelete
  7. @ಶಿವಪ್ರಕಾಶ್
    ಧನ್ಯವಾದಗಳು

    @Shobha Hegde
    ಓ ನಿನಗೆ ಆ ವಿಶ್ಯನೇ ಹೇಳಿಲ್ಲ ಅಲ್ಲಾ!
    ಹ್ಹಿ ಹ್ಹಿ ಇಷ್ಟು ದಿನಾನೇ ಹೇಳಿಲ್ಲ, ಇನ್ನು ಈಗ್ಯಾಕೆ ಹೇಳ್ಲಿ?

    ReplyDelete