Tuesday, January 12, 2010

ಆಸೆ

ಜಗವೆಲ್ಲಾ ಮಲಗಿರಲು
ಒಲವಿನ ಅಲೆ ಬೀಸುತಿರಲು
ಪ್ರೀತಿಯೇ‌ ಮೈಯಾಗಿ ಹುಟ್ಟುವ
ಮುಂಜಾನೆಯ ಮುತ್ತಿನ ಹುಟ್ಟು
ನೋಡುವ ಆಸೆ

ಒಲವಿನ ಅರಮನೆಯಲ್ಲಿ
ಗಾನಸುಧೆ ಹರಿದಿರಲು
ಅರಿವೇ ಇಲ್ಲದಿರಲು
ಆ ಸಂಗೀತದ ಅಲೆಯಲ್ಲೊಂದು
ಕಂಪನವಾಗುವ ಆಸೆ

ಪ್ರೀತಿಯ ಶಕ್ತಿಗೆ ಮರುಳಾಗಿ
ನಡೆವ ಪ್ರತಿ ಹೆಜ್ಜೆಯೂ‌ ಕವಿತೆಯಾಗಿ
ಜಗವೆಲ್ಲಾ‌ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ

ಹೊಸತೆಲ್ಲವನ್ನೂ‌ ಬಯಸುತಿರಲು
ಯುಗಗಳೆಲ್ಲಾ ಕ್ಷಣಗಳಾಗಿರಲು
ಜಗವೇ‌ ಅಂಗೈಯಲಿರಲು
ಮಾಯಾಮೃಗದ ಬೆನ್ನೇರಿ ಓಡುವ ಆಸೆ

ಹುಡುಗು ಕಣ್ಣಿಗೆ ಎಲ್ಲವೂ‌ ಕೌತುಕವಾಗಿರಲು
ಕಂಡದ್ದರ ಹಿಂದೆ ಕಾಣದ್ದನ್ನು ಹುಡುಕುತಿರಲು
ರಾತ್ರಿ ಬೆಳಕೆಂಬ ಆಟವಾಡುವ
ಸೂರ್ಯನ ಬೆನ್ನತ್ತುವ ಆಸೆ

ಜೀವನದ ಪ್ರತಿ ಪುಟದಲ್ಲೂ
ಹೊಸ ಜಾಗ ಕಂಡಿರಲು
ಹೊಸ ಅಲೆ ಹೊರಟಿರಲು
ಆ ಅಲೆಯ ಜಾಡು ಹಿಡಿದು
ದಿಗಂತದೆಡೆಗೆ ಹೋಗುವ ಆಸೆ

30 comments:

  1. " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎನ್ನುವ ಕವಿವಾಣಿಯಂತೆ ನಿಮ್ಮ ಆಸೆಗಳೂ ಕೂಡ. ಮಾಯಮೃಗದ ಬೆನ್ನೇರಿ .....ಸಾಲು ಚೆನ್ನಾಗಿದೆ. ಧನ್ಯವಾದಗಳು

    ReplyDelete
  2. ಧನ್ಯವಾದಗಳು ಸುಬ್ರಹ್ಮಣ್ಯ ಸರ್.
    ಇನ್ನೂ ಕಾಲೇಜಿನಲ್ಲಿದ್ದಾಗ ಬರೆದದ್ದು ಇದು. ಮನೆಯಲ್ಲಿ ಕೂತು ಡೈರಿ ತಿರುಗಿಸುತ್ತಿದ್ದಾಗ ಕಣ್ಣಿಗೆ ಬಿತ್ತು, ಇಲ್ಲಿಗೆ ತಂದು ಹಾಕಿದೆ.

    ReplyDelete
  3. ಆನಂದ್,
    ಆಸೆ ಇರಲೆಬೇಕು ಅಲ್ವ....
    ಕವನ ಬಹಳ ಚೆನ್ನಾಗಿದೆ....

    ReplyDelete
  4. ಆಸೆ ಇದ್ದಲ್ಲಿ ಗುರಿ ಮುಟ್ಟಲು ಸಾಧ್ಯ.
    ಚೆ೦ದದ ಕವನ

    ReplyDelete
  5. ಭಾವ ತು೦ಬಿದ ಕವನ .
    ಸ೦ಗೀತಲ್ಲೊ೦ದು ಕ೦ಪನವಾಗುವಾಸೆ..
    ಕಾವ್ಯದಲ್ಲೊ೦ದು ಭಾವವಾಗುವ ಆಸೆ....ಈ ಸಾಲುಗಳು ತು೦ಬಾ ಇಷ್ಟವಾಯ್ತು.
    ಕವನ ತು೦ಬಾ ಚೆನ್ನಾಗಿದೆ.

    ReplyDelete
  6. ನಿಮ್ಮ ಆಸೆಗೆ All the best... :)
    nice one :)

    ReplyDelete
  7. nimma kavite manassige tumba hattiravagide.

    ReplyDelete
  8. ಆನಂದ್ ಸರ್
    ಕೆಳಗಿನ
    ಪ್ರೀತಿಯ ಶಕ್ತಿಗೆ ಮರುಳಾಗಿ
    ನಡೆವ ಪ್ರತಿ ಹೆಜ್ಜೆಯೂ‌ ಕವಿತೆಯಾಗಿ
    ಜಗವೆಲ್ಲಾ‌ ಕಾವ್ಯಮಯವಾಗಿರಲು
    ಆ ಕಾವ್ಯದಲ್ಲೊಂದು ಭಾವವಾಗುವ ಆಸೆ

    ಸಾಲುಗಳು ತುಂಬಾ ಹಿಡಿಸಿತು

    ಅದ್ಭುತ ಕವಿತೆ

    ReplyDelete
  9. ಆನಂದ,
    ಉತ್ಸಾಹದ ಈ ನಿಮ್ಮ ಆಸೆಗಳನ್ನು ಹೊತ್ತಿರುವ ಕವನ ಸೊಗಸಾಗಿದೆ. ನಿಮ್ಮ ಆಸೆಗಳು
    ಕೈಗೂಡಲಿ!

    ReplyDelete
  10. ಮಹೇಶ್ ಸರ್,
    ಅಲ್ವೇ ಮತ್ತೆ :) ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ಆದರೆ ಆಸೆಗಳಂತೂ‌ ಬಹಳಷ್ಟು ಇವೆ.
    ಧನ್ಯವಾದಗಳು.

    ReplyDelete
  11. ವಿಜಯಶ್ರೀ,
    ನಿಜ. ಒಂದು ಆಸೆ, ಕನಸಿದ್ದಲ್ಲಿ ಮಾತ್ರ ಗುರಿ ತಲುಪಿದೆವು ಅಂತ ಹೇಳಲು ಸಾಧ್ಯ. ಇಲ್ಲವಾದಲ್ಲಿ ಅದು ಅರ್ಥವಿಲ್ಲದ ಪಯಣವಾದೀತು ಅಲ್ಲವೇ?

    ReplyDelete
  12. ಮನಮುಕ್ತಾ,
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  13. ಶಿವಪ್ರಕಾಶ್,
    ಥ್ಯಾಂಕ್ಸ್!

    ReplyDelete
  14. ವಿಜಯಕುಮಾರಿ,
    ಸ್ವಾಗತ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  15. ಗುರು ಸರ್,
    ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್

    ReplyDelete
  16. ಸುನಾಥ ಕಾಕಾ
    ನಿಮ್ಮ ಹಾರೈಕೆಗೆ ಧನ್ಯವಾದಗಳು

    ReplyDelete
  17. tumba chennagide, aase irabeku.. avugaLalli kelavu eederutte kelavu illa aste...

    nimma oLLeya aasegaLella nereverali..

    sankrati shubhashayagaLu

    ReplyDelete
  18. ಆಶಾವಿಲಾಸಿ ಅನ್ನಬಹುದೇ ನಿಮಗೆ ಕವಿತೆ ಚೆನ್ನಾಗಿದೆ

    ReplyDelete
  19. ಮನಸು ಮೇಡಂ,
    ನಿಮ್ಮ ಹಾರೈಕೆಗೆ ಧನ್ಯವಾದಗಳು.

    ReplyDelete
  20. ಉಮೇಶ್ ಸರ್,
    ಧಾರಾಳವಾಗಿ ಅನ್ರೀ..
    ಖರೇನ ಅದ್ರಾಗ ಎಷ್ಟು ಆಗ್ತಾವೋ ಇಲ್ಲೋ ಗೊತ್ತಿಲ್ಲ. ಆದ್ರ ಕನಸು ಕಾಣೂದ ಬಿಡಂಗಿಲ್ಲ ನೋಡ್ರಿ. :)

    ReplyDelete
  21. ಆನಂದ್, ವಿವಿಧ ಪರಿಸ್ಥಿತಿಗಳಲ್ಲಿ ಮನ ಹುಚ್ಚೆದ್ದು ಕುಣಿದು ಏನಾಗಬಯಸುತ್ತದೆಂದು ಬಹಳ ನಯವಾಗಿ ಭಾವಪ್ರಕಟಣೆ ಮಾಡಿದ್ದೀರಿ ಅಭಿನಂದನೆ.

    ReplyDelete
  22. ಬಹಳ ಸುಂದರವಾದ ಕವನ.

    ReplyDelete
  23. ಮನದಾಳದ ಆಶಯಗಳ ನವಿರು ನಿರೂಪಣೆಯ ಕವನ. ಆಶಯಗಳೂ ಕೈಗೂಡಲಿ.

    ReplyDelete
  24. ಸುಂದರವಾದ ಕವನ, ನಿಮ್ಮ ಆಸೆಗಳು ಕೈಗೂಡಲಿ,

    ReplyDelete
  25. ಆಜಾದ್ ಸರ್, ಸಹನಾ, ಸೀತಾರಾಮ್ ಸರ್, ನಿಶಾ ಮೇಡಂ
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

    ReplyDelete
  26. ಗುರು... ಸೂಪರ್ ಕವನ... ಮನಸ್ಸಿಗೆ ಆಸೆ ಕನಸು ಇದ್ದಾರೆ ಸಾಕು.. ಫುಲ್ ಕುಶಿ ಆಗಿ ಇರುತ್ತೆ... ಅಲ್ವ..?
    ನಿಮ್ಮವ,
    ರಾಘು.

    ReplyDelete
  27. ನಿಜ ರಾಘು, ಥ್ಯಾಂಕ್ಸ್!

    ReplyDelete
  28. ಆಸೆಗಳನ್ನ ಚೆನ್ನಾಗಿ ವರ್ಣಿಸಿದ್ದೀರಿ.

    ReplyDelete
  29. ಧನ್ಯವಾದಗಳು ಉಮಾ.

    ReplyDelete
  30. "ಸಂಗೀತದ ಅಲೆಯಲ್ಲೊಂದು
    ಕಂಪನವಾಗುವ ಆಸೆ"
    "ಜಗವೆಲ್ಲಾ‌ ಕಾವ್ಯಮಯವಾಗಿರಲು
    ಆ ಕಾವ್ಯದಲ್ಲೊಂದು ಭಾವವಾಗುವ ಆಸೆ"

    ನನ್ನನ್ನು ಅತಿಯಾಗಿ ಸೆಳೆದ ಸಾಲುಗಳಿವು. ಆಕಸ್ಮಿಕವಾಗಿ ನಿಮ್ಮ ಬ್ಲಾಗ್ ಗೆ ಬಂದೆ. ನಿಜಕ್ಕೂ ವೈವಿಧ್ಯಮಯ ಬರಹ.

    ReplyDelete