ಸುರಿವ ಕತ್ತಲೆಯ ರಾತ್ರಿ
ಮನೆಯ ಮಹಡಿಯ ಮೇಲೆ
ನಿಂತು ನೋಡುತ್ತಿರಲು
ದೈತ್ಯ ಗುಡ್ಡದ ಹಿಂದೆ
ಸ್ತಬ್ಧ ಕಾಡಿನ ನಡುವೆ
ನಕ್ಷತ್ರವೊಂದು ಜಾರಿಬಿತ್ತು
ತಾರೆಗಳ ರಾಜಕುಮಾರಿ
ತಾರಸಿಯಿಂದ ಬಗ್ಗಿ ನೋಡಿ
ಜಾರಿಬಿದ್ದು ಕಾಲುಮುರಿದುಕೊಂಡಿರಲು
ನಾನಲ್ಲಿಗೆ ಹೋಗಿ...
ಛೇ, ಅಪ್ಪ ಹೇಳಿದ ಕಥೆ ಈಗೆಷ್ಟು ಬಾಲಿಶ
ಓದಿ ಕೆಟ್ಟೆನೋ ನಾನು
ಅಬಲೆ ತಾರೆಯ ಕೂಗು
ನನಗಿಂದು ಕೇಳುತ್ತಿಲ್ಲ
ಹರಿವ ತುಂಗೆಯ ಮೇಲೆ
ಬೆರಗುಗಣ್ಣು ತೇಲಿದಂತಾಗಿ
ಮೆಟ್ಟಿಲಿಳಿದು ಮನೆಗೆ
ಬಂದು ಕದವಿಕ್ಕಿದೆ
ಬೀಸಿಬಂದ ಬಾಲ್ಯ
ಬಾಗಿಲಿಗೆ ಬಡಿದು
ಅಂಗಳದಲ್ಲಿ ಬಿದ್ದಿತ್ತು
ನಿನ್ನೆಯೇ ಉತ್ತರಾಯಣ
ಆದರೂ ರಾತ್ರಿಯಿಡೀ ನರಳಿತ್ತು
ಬಾಲ್ಯದ ನೆನಪನ್ನು ಬರೆಯ ಹೊರಟವನು ಮತ್ತೆಲ್ಲಿಗೋ ಹೋಗಿ ನಿಂತೆ. ಬಾಲ್ಯದ ನೆನಪು ಎಷ್ಟು ಮಧುರವೋ ಅದು ಮುಗಿದು ಹೋಯಿತೆಂಬ ಅರಿವು ಅಷ್ಟೇ ಖೇದಕರ. ನಾನಿನ್ನು ಚಿಕ್ಕಮಗುವಲ್ಲ, ಅವುಗಳ ಬೆರಗು, ಆ ಕುತೂಹಲ ನನ್ನಲ್ಲಿನ್ನೂ ಉಳಿದಿಲ್ಲ. ಮತ್ತೇನು ಮಾಡಹೊರಟರೂ ಅಂದಿನ ನೆನಪಿನ ನಕಲಾದೀತಷ್ಟೇ. ನಿಸರ್ಗದ ಸೊಬಗನ್ನು ಸವಿಯಬಲ್ಲೆ, ಆದರೆ ಹೌದಾ ಅಪ್ಪಾ, ಅದು ಹಾಗಾ... ಊಹೂಂ, ಉಳಿದಿಲ್ಲ. ಬದುಕಲು ಅನ್ನ ನೀಡಿದ ವಿದ್ಯೆ ಆ ಚಿಕ್ಕಚಿಕ್ಕ ಸಂತೋಷಗಳನ್ನು ನನ್ನಿಂದ ಕಸಿದಿದೆ.
ಬಾಲ್ಯದ ನೆನಪು...
ReplyDeleteಮಧುರ.....!
ಉಸಿರು ನಿಲ್ಲುವ ವರೆಗೂ ಮಾಧುರ್ಯ ಮಾಸದು....!!!
ವ೦ದನೆಗಳು.
ತುಂಬಾ ತುಂಬಾ ಚೆನ್ನಾಗಿದೆ.ಓದಿ ಕೆಟ್ಟಿರುವುದು ನಿಜ, ಬಾಲ್ಯದ ಮುಗ್ದತೆ ಪೂರ್ತಿಯಾಗಿ ಕಳೆದು ಹೋಗಿದೆ ನಮ್ಮಲ್ಲಿ.ಜೊತೆಗೆ ಖುಷಿಪಡುವ ಸಾಮರ್ಥ್ಯ ಕೂಡ!
ReplyDeleteಬಾಲ್ಯದ ನೆನಪು ಸದಾ ಹಸಿರು. ಅದರ ಮಾಧುರ್ಯ ಸುತ್ತೂ ಹರ್‍ಅಡಿರುತ್ತೆ ಯಾವಾಗಲೂ. ಕವನ ಚೆನ್ನಾಗಿದೆ.
ReplyDeleteನಾವು ಬೆಳೆದು ದೊಡ್ಡವರಾದ ಹಾಗೆ ನಮ್ಮ ಮುಗ್ಧತೆ ಕಳೆದುಕೊಳ್ಳುತ್ತೇವೆ. ಆಗಿನ ಸಣ್ಣ ಪುಟ್ಟ ಸಂತೋಷಗಳೂ ಈಗ ನಮಗೆ ಬಾಲಿಶ ಎನಿಸಿಬಿಡುತ್ತವೆ. ಕವನ ಚೆನ್ನಾಗಿದೆ
ReplyDeleteಬಾಲ್ಯದ ನೆನಪಿನ ವೀಣೆ ತನ್ನ೦ತೆ ತಾನೆ ಮಿಡಿದು
ReplyDeleteನಾದ ಮಾಡಿದೆ ಅಕ್ಷರಗಳ ರೂಪದಲ್ಲಿ,
ಭಾವ ಮೂಡಿಸಿದೆ ಕವನದಲ್ಲಿ.
ನಿಮ್ಮ ಕವನ ಚೆನ್ನಾಗಿದೆ.
baalyada nenapina saalugaLu bahaLastu khushi needutte allave. tumba chennagide kavana
ReplyDeleteಬಾಲ್ಯದ ಮುಗ್ಧತೆಯ ನಿರೂಪಣೆ ತುಂಬಾ ಚೆನ್ನಾಗಿ ಬಂದಿದೆ.
ReplyDeleteChennagide Ananda avare.
ReplyDeletenimma barahagalannu ega ondondaagi oduttaa iddene. ellavu chennagive.
ಬಾಲ್ಯದ ನೆನಪು...ಬಹಳ ಚೆಂದ..
ReplyDeleteಚೆನ್ನಾಗಿತ್ತು ಕವನ..
neevu heliddu sari..
ReplyDelete"I was born intelligent
But education ruind me"...
ಚೆನ್ನಾಗಿದೆ ಕವನ.....ನೆನಪುಗಳೇ ಹೀಗೇ...ಅದರಲ್ಲೂ ಬಾಲ್ಯದ ನೆನಪು ಮಧುರ....
ReplyDeleteಬಾಲ್ಯದ ನೆನಪುಗಳನ್ನು ನೆನಪಿಸಿದ್ದೀರಿ...... ಕವನ ಚೆನ್ನಾಗಿದೆ...... ಧನ್ಯವಾದ....
ReplyDeleteಕವನದ ಓಘ - ತುಂಗೆ ಜುಳು ಜುಳು ಹರಿದು ಸಾಗರವಾದ ಹಾಗೆ, ಚಿಗುರು ಮರವಾಗಿ ಬೆಳೆದ ಹಾಗೆ. ಆದರೆ, ಓದುತ್ತಾ ಹೋದಂತೆ ಮನ ಭಾರವಾಯ್ತು.
ReplyDeletenice one...nenapu sivi nenapu...!
ReplyDeleteRaaghu
Balyada nenapugala kavana chennagi moodi bandide.
ReplyDeleteಬಾಲ್ಯದ ನೆನಪ್ನಲ್ಲಿ ಆದ್ದಿದ ಕವನ ಚೆನ್ನಾಗಿದೆ....
ReplyDeletetumbaa chennagide sir
ReplyDeletebalyada nenapina kavana superaagide sir :)
ReplyDeletesir chennagide:)
ReplyDeleteತುಂಬಾ ಇಷ್ಟವಾಯಿತು ಕವನ. ನನ್ನ ಬಾಲ್ಯದ ಹಲವು ನೆನಪುಗಳನ್ನು ಹಸಿರಾಗಿಸಿತು. ಮತ್ತೊಮ್ಮೆ ಉಸಿರಾಡುವಂತೆ ಮಾಡಿತು. ಧನ್ಯವಾದಗಳು.
ReplyDeleteತುಂಬಾ ಚೆಲುವಾದ ಕವಿತೆ.
ReplyDeleteಬಾಲ್ಯದ ನೆನಪನ್ನು ಬರೆಯ ಹೊರಟವನು ಮತ್ತೆಲ್ಲಿಗೋ ಹೋಗಿ ನಿಂತೆ. ಬಾಲ್ಯದ ನೆನಪು ಎಷ್ಟು ಮಧುರವೋ ಅದು ಮುಗಿದು ಹೋಯಿತೆಂಬ ಅರಿವು ಅಷ್ಟೇ ಖೇದಕರ. ನಾನಿನ್ನು ಚಿಕ್ಕಮಗುವಲ್ಲ, ಅವುಗಳ ಬೆರಗು, ಆ ಕುತೂಹಲ ನನ್ನಲ್ಲಿನ್ನೂ ಉಳಿದಿಲ್ಲ. ಮತ್ತೇನು ಮಾಡಹೊರಟರೂ ಅಂದಿನ ನೆನಪಿನ ನಕಲಾದೀತಷ್ಟೇ. ನಿಸರ್ಗದ ಸೊಬಗನ್ನು ಸವಿಯಬಲ್ಲೆ, ಆದರೆ ಹೌದಾ ಅಪ್ಪಾ, ಅದು ಹಾಗಾ... ಊಹೂಂ, ಉಳಿದಿಲ್ಲ. ಬದುಕಲು ಅನ್ನ ನೀಡಿದ ವಿದ್ಯೆ ಆ ಚಿಕ್ಕಚಿಕ್ಕ ಸಂತೋಷಗಳನ್ನು ನನ್ನಿಂದ ಕಸಿದಿದೆ.
ReplyDeleteಕವನ ಮೆಚ್ಚಿದ ನಿಮ್ಮೆಲ್ಲರಿಗೂ ವಂದನೆಗಳು.