Monday, January 25, 2010

ಕವಿತೆ ಹುಟ್ಟದ ರಾತ್ರಿ

ಕೈಗೆ ಸಿಗದ ಶಬ್ದಗಳು
ಜಾರಿಬಿದ್ದ ಚಿನ್ಹೆಗಳು
ಬರೆ ಬರೆದು ಸವೆದ ಸಾಲುಗಳು
ಮರೆತುಹೋದ ಪದ್ಯಗಳು
ಅಮೂರ್ತ ಭಾವಗಳು
ದಂಡಾಗಿ ಬಂದು
ದಂಡೆಗೆ ಅಪ್ಪಳಿಸಿದಂತೆ.
ಭರ್ಜರಿ ಮೊರೆತ
ಕಿವಿ ತಮಟೆ ತೂತಾಗಿ
ಕಣ್ಣುಗಳು ಕತ್ತಲಾಗಿ
ಕಾಲ ಕೆಳಗಿನ ನೆಲ ಕುಸಿದು
ಆಸರೆಗೆ ತಡಕಾಡಿ
ಆಗಸಕೆ ಕೈ ಎತ್ತಿ
ದನಿ ಇಂಗಿ ಬಾಯ್ತೆರೆದು
ಕವಿತೆ ಹುಟ್ಟದ ರಾತ್ರಿ ಬೆಚ್ಚಿಬಿದ್ದೆ.

30 comments:

  1. Nice one, padagala jodane sogasagide.

    ReplyDelete
  2. ತುಂಬಾ ಚೆನ್ನಾಗಿದೆ ಆನಂದ್ ಸರ್ .. ಕವಿತೆ ಹುಟ್ಟದ ರಾತ್ರಿ ಬೆಚ್ಚಿಬಿದ್ದೆ.. ಸೂಪರ್

    ReplyDelete
  3. ಬೆಚ್ಚಿಬಿದ್ದದ್ದು ಚೆನ್ನಾಗಿದೆ....Nice one...!

    ReplyDelete
  4. ಕವಿತೆ ಹಿಡಿಸಿತು.ಚೆನ್ನಾಗಿದೆ.ಬರೆಯುತ್ತಿರಿ.

    ReplyDelete
  5. ಬಹಳ ಸುಂದರವಾಗಿದೆ.

    ReplyDelete
  6. ಕವಿತೆ ಹುಟ್ಟುವ ಆರ್ಭಟ ಜೋರಾಗಿದೆಯಲ್ಲ!

    ReplyDelete
  7. ಚೆನ್ನಾಗಿದೆ ಸಾಲುಗಳು....
    ಬರೆಯುತ್ತಿರಿ

    ReplyDelete
  8. tumba chennagide, kavige huttadeye kavite baredubittideeri.

    ReplyDelete
  9. Nice writing. Software developers0000 real estate developers taraha bare hedaristaare andkodidde! Bechchi beeluvudoo untalla! Adu creative aagi yochisuvavarige maatra sadhya. No doubt have a creative software!

    ReplyDelete
  10. ಬೆಚ್ಚಿ ಬಿದ್ದದ್ದು ಸರಿ...
    ಆಮೇಲೆ ಬೆಳಗಾಯ್ತೆ೦ದು ಯಾರಾದರೂ ಎಬ್ಬಿಸಿದರಾ...?

    ReplyDelete
  11. ಸರ್,
    ಕವಿತೆ ಹುಟ್ಟದ ರಾತ್ರಿನೇ ಹೀಗಾದ್ರೆ ಹುಟ್ಟಿದ ರಾತ್ರಿ ಹೇಗೆ :)

    ಸೊಗಸಾಗಿದೆ

    ReplyDelete
  12. ಒಂದೊಂದೂ ಪದಗಳನ್ನೂ ಬಹಳ ಚೆನ್ನಾಗಿ ಉಪಯೋಗಿಸಿದ್ದೀರಿ... ಉದಾಹರಣೆಗೆ "ದಂಡಾಗಿ ಬಂದು ದಂಡೆಗೆ ಅಪ್ಪಳಿಸಿದಂತೆ"... ಪದಭಂಡಾರ ಚೆನ್ನಾಗಿದೆ... ಇಷ್ಟ ಆಯ್ತು...

    ReplyDelete
  13. ತುಂಬಾ ಇಷ್ಟವಾಯ್ತು ಕವಿತೆ.

    ReplyDelete
  14. ನಿಮ್ಮ ಬ್ಲಾಗ್ ಸೊಗಸಾಗಿದೆ, ಈಗಷ್ಟೇ ರೀಡರ್ ನಲ್ಲಿ ಸೇರಿಸಿಕೊಂಡಿದ್ದೇನೆ.

    ReplyDelete
  15. ಪದ - ಭಾವಗಳ ಮಧುರ ಗುಂಜಾರವ.

    ReplyDelete
  16. ಕವಿತೆಯ -ಗರ್ಭಾ೦ಕುರ ಮತ್ತು ಪ್ರಸವದ ಬಗ್ಗೆ ಪ್ರಸ್ತಾವ ಸಹಜ. ಆದರೆ ಕವಿತಾಗರ್ಭಪಾತದ ಬಗ್ಗೆಯೂ ಬರೆದರೇ ವಿನೂತನ. ತಮ್ಮ ಅಭಿವ್ಯಕ್ತಿ ಚೆನ್ನಾಗಿ ಮೂಡಿದೆ. ಜೊತೆಗೆ ಕವಿತೆಯ ಹುಟ್ಟಿನ ಮೂಲವನ್ನು ಚೆನ್ನಾಗಿ ಸೆರೆ ಹಿಡಿದಿದೆ.

    ReplyDelete
  17. ಆನಂದ್ ಎಳೆಗಳನ್ನು ಬಹಳ ಚನ್ನಾಗಿ ಬಿಡಿಸಿ ಪದಾರ್ಥಕ್ಕೆ ಅರ್ಥ ತರಿಸಿದ್ದೀರಿ....ಬಹುಪರಾಕ್...ಚನ್ನಾಗಿದೆ ಕವನ...

    ReplyDelete
  18. ಆನಂದ್,
    ನಿಮ್ಮ ಪದ ಭಂಡಾರ ತುಂಬಾ ಚೆನ್ನಾಗಿದೆ........... ಕವಿತೆ ಹುಟ್ಟದ ರಾತ್ರಿ......

    ReplyDelete
  19. Adke helodu solpa kammi gundu haakbeku anta.. illandre heege aagodu :-) (Sumne tamaashege)

    ReplyDelete
  20. ಚೆನ್ನಾಗಿದೆ,ಓಕೆ

    ReplyDelete
  21. ಕವನ ಮೆಚ್ಚಿದ ನಿಶಾ, ರಂಜಿತಾ, ಸುಬ್ರಹ್ಮಣ್ಯ ಭಟ್, ಮನಮುಕ್ತಾ, ಸಹನಾ ನಿಮಗೆಲ್ಲರಿಗೂ ಧನ್ಯವಾದಗಳು.

    ಸುನಾಥ ಕಾಕಾ,
    ಎಚ್ಚರವಾಗುವಷ್ಟು ಗದ್ದಲ ಜೋರಾಗಿತ್ತು. ನಿಮಗೂ ಕೇಳಿಸಿತೇ... :)

    ಮಹೇಶ್ ಸರ್,
    ಧನ್ಯವಾದಗಳು

    ಮನಸು ಮೇಡಂ,
    ನಾವಂದುಕೊಳ್ಳದೆಯೇ ಒಂದಿಷ್ಟು ಕೆಲಸಗಳು ನಡೆದು ಹೋಗುತ್ತವೆ. ಅದರಲ್ಲಿ ಇದೂ ಒಂದು :)

    ReplyDelete
  22. ವಸಂತ್ ಸರ್,
    ನನ್ನ ಬ್ಲಾಗಿಗೆ ಸ್ವಾಗತ. real estateಊ, softwareಊ ಎರಡೂ ಬಿದ್ದು ಹೋಗಿವೆ. ಈಗ ಬೆಚ್ಚಿ ಬೀಳುವುದೊಂದೇ‌ ಉಳಿದಿರುವುದು. :)
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ವಿಜಯಶ್ರೀ ಮೇಡಂ,
    ಎಬ್ಬಿಸೋದೇನು ಬಂತು, ಆಮೇಲೆ ರಾತ್ರಿಯಿಡೀ ನಿದ್ದೇನೇ‌ ಮಾಡ್ಲಿಲ್ಲ!

    ಗುರು ಸರ್,
    ಕವಿತೆ ಹುಟ್ಟಿದ ರಾತ್ರೀನಾ ಸರ್, ಅಯ್ಯೋ ಆ‌ ಪ್ರಸವ ವೇದನೆಯನ್ನೇನು ಕೇಳ್ತೀರಾ... :)

    ಪ್ರಭು,
    ಸ್ವಾಗತ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಉಮಾ ಮೇಡಂ,
    ಧನ್ಯವಾದಗಳು

    ReplyDelete
  23. ರಂಜಿತ್
    ಸ್ವಾಗತ. ನಿಮ್ಮ ಬ್ಲಾಗ್ ನೋಡಿ ಬಂದೆ. ಸೊಗಸಾಗಿ ತೋಟ ಬೆಳೆಸಿದ್ದೀರ :)

    ನಾರಾಯಣ್ ಸರ್, ಸೀತಾರಾಮ್ ಸರ್, ಆಜಾದ್ ಸರ್, ದಿನಕರ್ ಸರ್,
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

    ರವಿಕಾಂತ್ ಸರ್,
    ಸ್ವಾಗತ.
    ತಪ್ಪು ತಿಳಿದಿದ್ದೀರಾ, ಒಂದ್ಸಲ ಗುಂಡು ಹಾಕಿದರೆ ಪುಂಖಾನುಪುಂಖವಾಗಿ ಕಾವ್ಯಸೃಷ್ಟಿ ಮಾಡಬಹುದು ಅಂತ ತಿಳಿದೋರು ಹೇಳಿದ್ದು ಕೇಳಿದ್ದೆ.

    ವಿಶ್ಣು ಸರ್
    ok thanks!

    ReplyDelete
  24. nice one friend..tumba chennagide :)

    ReplyDelete
  25. ನಮಸ್ತೆ.,

    ಏನ್ ಸರ್ ನಿಮ್ಮ ವರ್ಣನೆ ಶಾನೆ ಬೊಂಬಾಟಾಗಿದೆ..

    ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

    ReplyDelete
  26. nice one...hesarige takka artha kavanadallide...
    Raaghu

    ReplyDelete
  27. ನಿಮ್ಮ ಬ್ಲಾಗ್ ನ ಅಂಕಣವೆಲ್ಲ ಓದಿದೆ. ಲೇಖನಗಳು, ಕವಿತೆಗಳೆಲ್ಲ ಸುಂದರವಾಗಿದೆ. ನಿಮ್ಮ ಬ್ಲಾಗ್ ಮೆಚ್ಚುಗರಲ್ಲಿ ನಾನು ಒಬ್ಬ ಈಗ.

    ReplyDelete
  28. ಕವಿತೆ ಹುಟ್ಟದೆಯೇ ಹುಟ್ಟಿ ಬಂದ ಈ ಕವನ ತುಂಬಾ ಚೆನ್ನಾಗಿದೆ.

    ReplyDelete
  29. "Gaana to aata nahee hai magar" anta haaadu heLo haahe ....Kavite huttada ratri anteLi oLLe kavithene baradiddeera ...

    Good one

    ReplyDelete