ಜಗವೆಲ್ಲಾ ಮಲಗಿರಲು
ಒಲವಿನ ಅಲೆ ಬೀಸುತಿರಲು
ಪ್ರೀತಿಯೇ ಮೈಯಾಗಿ ಹುಟ್ಟುವ
ಮುಂಜಾನೆಯ ಮುತ್ತಿನ ಹುಟ್ಟು
ನೋಡುವ ಆಸೆ
ಒಲವಿನ ಅರಮನೆಯಲ್ಲಿ
ಗಾನಸುಧೆ ಹರಿದಿರಲು
ಅರಿವೇ ಇಲ್ಲದಿರಲು
ಆ ಸಂಗೀತದ ಅಲೆಯಲ್ಲೊಂದು
ಕಂಪನವಾಗುವ ಆಸೆ
ಪ್ರೀತಿಯ ಶಕ್ತಿಗೆ ಮರುಳಾಗಿ
ನಡೆವ ಪ್ರತಿ ಹೆಜ್ಜೆಯೂ ಕವಿತೆಯಾಗಿ
ಜಗವೆಲ್ಲಾ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ
ಹೊಸತೆಲ್ಲವನ್ನೂ ಬಯಸುತಿರಲು
ಯುಗಗಳೆಲ್ಲಾ ಕ್ಷಣಗಳಾಗಿರಲು
ಜಗವೇ ಅಂಗೈಯಲಿರಲು
ಮಾಯಾಮೃಗದ ಬೆನ್ನೇರಿ ಓಡುವ ಆಸೆ
ಹುಡುಗು ಕಣ್ಣಿಗೆ ಎಲ್ಲವೂ ಕೌತುಕವಾಗಿರಲು
ಕಂಡದ್ದರ ಹಿಂದೆ ಕಾಣದ್ದನ್ನು ಹುಡುಕುತಿರಲು
ರಾತ್ರಿ ಬೆಳಕೆಂಬ ಆಟವಾಡುವ
ಸೂರ್ಯನ ಬೆನ್ನತ್ತುವ ಆಸೆ
ಜೀವನದ ಪ್ರತಿ ಪುಟದಲ್ಲೂ
ಹೊಸ ಜಾಗ ಕಂಡಿರಲು
ಹೊಸ ಅಲೆ ಹೊರಟಿರಲು
ಆ ಅಲೆಯ ಜಾಡು ಹಿಡಿದು
ದಿಗಂತದೆಡೆಗೆ ಹೋಗುವ ಆಸೆ
" ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎನ್ನುವ ಕವಿವಾಣಿಯಂತೆ ನಿಮ್ಮ ಆಸೆಗಳೂ ಕೂಡ. ಮಾಯಮೃಗದ ಬೆನ್ನೇರಿ .....ಸಾಲು ಚೆನ್ನಾಗಿದೆ. ಧನ್ಯವಾದಗಳು
ReplyDeleteಧನ್ಯವಾದಗಳು ಸುಬ್ರಹ್ಮಣ್ಯ ಸರ್.
ReplyDeleteಇನ್ನೂ ಕಾಲೇಜಿನಲ್ಲಿದ್ದಾಗ ಬರೆದದ್ದು ಇದು. ಮನೆಯಲ್ಲಿ ಕೂತು ಡೈರಿ ತಿರುಗಿಸುತ್ತಿದ್ದಾಗ ಕಣ್ಣಿಗೆ ಬಿತ್ತು, ಇಲ್ಲಿಗೆ ತಂದು ಹಾಕಿದೆ.
ಆನಂದ್,
ReplyDeleteಆಸೆ ಇರಲೆಬೇಕು ಅಲ್ವ....
ಕವನ ಬಹಳ ಚೆನ್ನಾಗಿದೆ....
ಆಸೆ ಇದ್ದಲ್ಲಿ ಗುರಿ ಮುಟ್ಟಲು ಸಾಧ್ಯ.
ReplyDeleteಚೆ೦ದದ ಕವನ
ಭಾವ ತು೦ಬಿದ ಕವನ .
ReplyDeleteಸ೦ಗೀತಲ್ಲೊ೦ದು ಕ೦ಪನವಾಗುವಾಸೆ..
ಕಾವ್ಯದಲ್ಲೊ೦ದು ಭಾವವಾಗುವ ಆಸೆ....ಈ ಸಾಲುಗಳು ತು೦ಬಾ ಇಷ್ಟವಾಯ್ತು.
ಕವನ ತು೦ಬಾ ಚೆನ್ನಾಗಿದೆ.
ನಿಮ್ಮ ಆಸೆಗೆ All the best... :)
ReplyDeletenice one :)
nimma kavite manassige tumba hattiravagide.
ReplyDeleteಆನಂದ್ ಸರ್
ReplyDeleteಕೆಳಗಿನ
ಪ್ರೀತಿಯ ಶಕ್ತಿಗೆ ಮರುಳಾಗಿ
ನಡೆವ ಪ್ರತಿ ಹೆಜ್ಜೆಯೂ ಕವಿತೆಯಾಗಿ
ಜಗವೆಲ್ಲಾ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ
ಸಾಲುಗಳು ತುಂಬಾ ಹಿಡಿಸಿತು
ಅದ್ಭುತ ಕವಿತೆ
ಆನಂದ,
ReplyDeleteಉತ್ಸಾಹದ ಈ ನಿಮ್ಮ ಆಸೆಗಳನ್ನು ಹೊತ್ತಿರುವ ಕವನ ಸೊಗಸಾಗಿದೆ. ನಿಮ್ಮ ಆಸೆಗಳು
ಕೈಗೂಡಲಿ!
ಮಹೇಶ್ ಸರ್,
ReplyDeleteಅಲ್ವೇ ಮತ್ತೆ :) ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ಆದರೆ ಆಸೆಗಳಂತೂ ಬಹಳಷ್ಟು ಇವೆ.
ಧನ್ಯವಾದಗಳು.
ವಿಜಯಶ್ರೀ,
ReplyDeleteನಿಜ. ಒಂದು ಆಸೆ, ಕನಸಿದ್ದಲ್ಲಿ ಮಾತ್ರ ಗುರಿ ತಲುಪಿದೆವು ಅಂತ ಹೇಳಲು ಸಾಧ್ಯ. ಇಲ್ಲವಾದಲ್ಲಿ ಅದು ಅರ್ಥವಿಲ್ಲದ ಪಯಣವಾದೀತು ಅಲ್ಲವೇ?
ಮನಮುಕ್ತಾ,
ReplyDeleteಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಶಿವಪ್ರಕಾಶ್,
ReplyDeleteಥ್ಯಾಂಕ್ಸ್!
ವಿಜಯಕುಮಾರಿ,
ReplyDeleteಸ್ವಾಗತ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಗುರು ಸರ್,
ReplyDeleteನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್
ಸುನಾಥ ಕಾಕಾ
ReplyDeleteನಿಮ್ಮ ಹಾರೈಕೆಗೆ ಧನ್ಯವಾದಗಳು
tumba chennagide, aase irabeku.. avugaLalli kelavu eederutte kelavu illa aste...
ReplyDeletenimma oLLeya aasegaLella nereverali..
sankrati shubhashayagaLu
ಆಶಾವಿಲಾಸಿ ಅನ್ನಬಹುದೇ ನಿಮಗೆ ಕವಿತೆ ಚೆನ್ನಾಗಿದೆ
ReplyDeleteಮನಸು ಮೇಡಂ,
ReplyDeleteನಿಮ್ಮ ಹಾರೈಕೆಗೆ ಧನ್ಯವಾದಗಳು.
ಉಮೇಶ್ ಸರ್,
ReplyDeleteಧಾರಾಳವಾಗಿ ಅನ್ರೀ..
ಖರೇನ ಅದ್ರಾಗ ಎಷ್ಟು ಆಗ್ತಾವೋ ಇಲ್ಲೋ ಗೊತ್ತಿಲ್ಲ. ಆದ್ರ ಕನಸು ಕಾಣೂದ ಬಿಡಂಗಿಲ್ಲ ನೋಡ್ರಿ. :)
ಆನಂದ್, ವಿವಿಧ ಪರಿಸ್ಥಿತಿಗಳಲ್ಲಿ ಮನ ಹುಚ್ಚೆದ್ದು ಕುಣಿದು ಏನಾಗಬಯಸುತ್ತದೆಂದು ಬಹಳ ನಯವಾಗಿ ಭಾವಪ್ರಕಟಣೆ ಮಾಡಿದ್ದೀರಿ ಅಭಿನಂದನೆ.
ReplyDeleteಬಹಳ ಸುಂದರವಾದ ಕವನ.
ReplyDeleteಮನದಾಳದ ಆಶಯಗಳ ನವಿರು ನಿರೂಪಣೆಯ ಕವನ. ಆಶಯಗಳೂ ಕೈಗೂಡಲಿ.
ReplyDeleteಸುಂದರವಾದ ಕವನ, ನಿಮ್ಮ ಆಸೆಗಳು ಕೈಗೂಡಲಿ,
ReplyDeleteಆಜಾದ್ ಸರ್, ಸಹನಾ, ಸೀತಾರಾಮ್ ಸರ್, ನಿಶಾ ಮೇಡಂ
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ಗುರು... ಸೂಪರ್ ಕವನ... ಮನಸ್ಸಿಗೆ ಆಸೆ ಕನಸು ಇದ್ದಾರೆ ಸಾಕು.. ಫುಲ್ ಕುಶಿ ಆಗಿ ಇರುತ್ತೆ... ಅಲ್ವ..?
ReplyDeleteನಿಮ್ಮವ,
ರಾಘು.
ನಿಜ ರಾಘು, ಥ್ಯಾಂಕ್ಸ್!
ReplyDeleteಆಸೆಗಳನ್ನ ಚೆನ್ನಾಗಿ ವರ್ಣಿಸಿದ್ದೀರಿ.
ReplyDeleteಧನ್ಯವಾದಗಳು ಉಮಾ.
ReplyDelete"ಸಂಗೀತದ ಅಲೆಯಲ್ಲೊಂದು
ReplyDeleteಕಂಪನವಾಗುವ ಆಸೆ"
"ಜಗವೆಲ್ಲಾ ಕಾವ್ಯಮಯವಾಗಿರಲು
ಆ ಕಾವ್ಯದಲ್ಲೊಂದು ಭಾವವಾಗುವ ಆಸೆ"
ನನ್ನನ್ನು ಅತಿಯಾಗಿ ಸೆಳೆದ ಸಾಲುಗಳಿವು. ಆಕಸ್ಮಿಕವಾಗಿ ನಿಮ್ಮ ಬ್ಲಾಗ್ ಗೆ ಬಂದೆ. ನಿಜಕ್ಕೂ ವೈವಿಧ್ಯಮಯ ಬರಹ.