Tuesday, December 29, 2009

ಹೊಸ ವರ್ಷಕ್ಕೊಂದು ಕಿಚಡಿ

ವರ್ಷದ ಕೊನೆಗೊಂದು ಭರ್ಜರಿ ಲೇಖನ ಬರೆಯೋಣ ಅಂತ ಹೊರಟವನು, ಏನು ಬರೆಯೋದಕ್ಕೂ ತಿಳಿಯದೆ ಏನೇನೋ ಗೀಚ್ಹಾಕ್ಬಿಟ್ಟೆ. ( ಏಳು ಸುತ್ತಿನ ಕೋಟೆ ಚಿತ್ರದ ಏನೋ ಮಾಡಲು ಹೋಗಿ.. ಹಾಡು ನೆನೆಪಿಸಿಕೊಳ್ಳಿ )

ಹಳೇ ಸಿನಿಮಾಗಳಲ್ಲಿ ತೋರಿಸುವಂತೆ, ಬರೆದು ಬರೆದು ಸಮಾಧಾನವಾಗದೆ ಹರಿದು ಎಸೆಯುತ್ತಾರಲ್ಲ, ಹಾಗೆ ಮಾಡ್ಬೇಕಿತ್ತು ಆದ್ರೆ ನಾನು ಮಾಡ್ಲಿಲ್ಲ. ನಾನು ಸ್ವಲ್ಪ different. ಯಾವ್ಯಾವ ರೀತಿಯಲ್ಲಿ ಬರೀಬೇಕು ಅಂತ ಹೊರಟಿದ್ದೆನೋ ಅವುಗಳನ್ನೆಲ್ಲಾ ಹಾಗೇ ನಿಮ್ಮ ಮುಂದಿಡ್ತಾ ಇದ್ದೀನಿ. ಓದೋ ಕಷ್ಟ ನಿಮ್ದು. ನಿಮ್ಮಲ್ಲಿ ಯಾರಿಗಾದರೂ ಈ ರೀತಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ನನಗಿದು ಮೊದಲ ಸಲ. ಕೆಟ್ಟದಾಗದ್ರೂ ಸರಿ, ಬರೆದು ಮುಗಿಸ್ತಿದ್ದೆ. ಆದರೆ ಈ ಸಲ ಭಯಂಕರವಾಗಿ ಬರೀಬೇಕು ಅಂತ ಹೊರಟು ಏನೂ ಆಗ್ಲಿಲ್ಲ.

Trust me on this, this article looks just like me. Haphazard, confused and lost!

Well, here you go :)

***
1

ನಡೆದದ್ದೇ ಹಾದಿ ಎಂಬಂತೆ ಬಿಡು ಬೀಸಾಗಿ ಹೆಜ್ಜೆ ಹಾಕುತ್ತಾ ವರ್ಷದ ಕೊನೆಗಾಗಲೇ ಬಂದಾಗಿದೆ.
ಮನೆಯಲ್ಲಿ ನಿನಗಿನ್ನೂ ಹುಡುಗುಬುದ್ಧಿ ಹೋಗಿಲ್ಲ ಅನ್ನುವ ಹೊತ್ತಿಗೇ ಆಫೀಸಿನಲ್ಲಿ ನೀವು ಈ ಸಮಯದಲ್ಲಿ ಊರಿಗೆ ಹೋಗಲೇಬೇಕಾ ಎಂದು ಕೇಳುತ್ತಿದ್ದಾರೆ.
ಅರ್ಥ ಇಷ್ಟೇ, ನನಗಿನ್ನೂ ಜವಾಬ್ದಾರಿ ಬಂದಿಲ್ಲ. ( at least ಅವರು ಬಯಸುವಷ್ಟು )
ಯಾಕೆ ಬಂದಿಲ್ಲ? ದಿನಾ ಬೆಳಗ್ಗೆ ಸ್ವತಃ ನಾನೇ, ಅಲಾರಾಂ ಇಟ್ಟುಕೊಳ್ಳದೆ , ಎದ್ದು ಯಾರಿಂದಲೂ ಹೇಳಿಸಿಕೊಳ್ಳದೆ ತಯಾರಾಗುತ್ತೇನೆ. ಒಂದೆರಡು ಗಂಟೆಯ ವ್ಯತ್ಯಾಸವಾದ್ರೂ ಪ್ರತಿದಿನ ತಪ್ಪದೇ ಆಫೀಸಿಗೆ ಹೋಗುತ್ತೇನೆ.

***
2

ಇನ್ನೂ ನಿನ್ನೆ ಮೊನ್ನೆ ಹೊಸವರ್ಷವನ್ನು ಸ್ವಾಗತಿಸಿದಂತಿರುವಾಗಲೇ, ವರ್ಷ ಮುಗಿದಾಗಿದೆ. ಇನ್ನೊಂದೆರಡು ದಿನ ಬೆಚ್ಚಗೆ ಹೊದ್ದು ಮಲಗಿದರಾಗಲೇ ಮತ್ತೊಂದು ವರ್ಷ.
ಸಮಯ ಅದು ಹೇಗೆ ಓಡುತ್ತದಲ್ಲವೇ? ಈ ಮುನ್ನೂರು ಚಿಲ್ಲರೆ ದಿನಗಳಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನು ನೋಡಿದ್ದೇವೆ. ಇಂದಿರೆಯ ಹತ್ಯೆಯಾಗಿ ಇಪ್ಪತ್ತೈದು ವರ್ಷ. ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ಕ್ರಿಕೆಟ್ ನಿಂದ ದುಡ್ಡು ಮಾಡಲು ಶುರುಮಾಡಿ ಇಪ್ಪತ್ತು ವರ್ಷ. ಮುಂಬಯಿಯ ನರಮೇಧಕ್ಕೂ ಆಗಲೇ ಒಂದು ವರ್ಷ. ಹಾಂ, ಮಹಾಪ್ರಳಯಕ್ಕಿನ್ನೆರಡೇ ವರ್ಷ!.

***
3
ಹ್ಮ್, ಇಂಗ್ಲೀಷಲ್ಲೂ ಒಂದ್ ಕೈ ನೋಡೇ ಬಿಡಣ ಅಂತ ಹೊರಟೆ

I'm not gonna say that this year has been fantastic, may the coming one be better than this. We've achieved a lot in this year, but still there are a lotta things to do blah blah blah...

For me, this one was just like any other year in my life so far. Charming, challenging, with lot of unexpected twists n turns, and funny with a little dark shadow to it. I saw this year become a fine lady from a small girl. Well, it's already the time to hug another silly little girl now. Ah, she's standing there at the doorstep already, staring at me with her cute little face and a wicked smile on her lips. Dunno what her plans for me are, but I'm gonna love her just like how I've loved all my twenty odd ex-girlfriends. Hey! a little patience darling, I'll catch up with you soon.

ಇಲ್ಲಿಗೆ, ಇದನ್ನು ಇನ್ನು ಮುಂದುವರೆಸಬಾರದು ಅಂತ, ಪ್ರಯತ್ನ ಮಾಡೋದನ್ನ ಕೈಬಿಟ್ಟೆ :(

***

ಈ ಬಾರಿ, ಸಮುದ್ರ ತೀರವೊಂದಕ್ಕೆ ಹೊಸ ವರ್ಷವನ್ನು ಸ್ವಾಗತಿಸಲು, ಎಂದಿನಂತೆ ಕಪಿ ಸೈನ್ಯದೊಂದಿಗೆ ತೆರಳುತ್ತಿದ್ದೇನೆ. ( ಬ್ರಹ್ಮಚಾರೀ ಶತಮರ್ಕಟ ಅಂತ ಅಪ್ಪ ಹೇಳ್ತಾ ಇದ್ರು. ನಾವೊಂದು ಹದಿನೈದಿಪ್ಪತ್ತು ಜನ ಮದುವೆಯಾಗದವರು ಅಲ್ಲಿಗೆ ಹೋಗ್ತಾ ಇದ್ದೀವಿ, ಅಲ್ಲಿ ಏನಾಗುತ್ತೋ !)
ನನ್ನ ಬಹುಪಾಲು ಗೆಳೆಯರ ಪಾಲಿಗೆ ಬಹುಶಃ ಇದೇ ಕೊನೆಯ bachelors' party ಆಗಬಹುದು.
ಕೆಲವರ ಸ್ವಾತಂತ್ರ್ಯ ಹರಣಕ್ಕಾಗಲೇ ಮಸಲತ್ತು ನಡೆಯುತ್ತಿರುವ ಬಗ್ಗೆ ವರದಿ ಬಂದಿದೆ. And it seems they're happy about the life sentence!

ನಾಳೇನೇ ಊರಿಗೆ ಹೋಗ್ತಿರೋದರಿಂದ ನಿಮಗೆಲ್ಲರಿಗೂ in advance, new year wishes.
ಹೊಸ ವರ್ಷ ನಿಮ್ಮೆಲ್ಲರಲ್ಲಿ ಹೊಸ ಕನಸುಗಳನ್ನು ಬಿತ್ತಲಿ. May you see all your dreams blossom in the coming year.

P.S. : As a new year gift, I promise you that I won't post another one like this :)

13 comments:

  1. happy new year to all friends..... ella lekhanagaloo chennaagive.......

    ReplyDelete
  2. ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಸಖತ್ತಾಗಿರಲಿ ಎಂದು ಹಾರೈಸುತ್ತೇನೆ.

    ReplyDelete
  3. Wish You Happy New Year...
    May All Dreams Come True In New Year :)

    ReplyDelete
  4. ಭರ್ಜರಿ ಕಿಚಡಿನೆ...ಚೆನಾಗಿದೆ ಬರೆದದ್ದು.
    ಹೊಸವರ್ಷದ ಶುಭ ಹಾರೈಕೆಗಳು.

    ReplyDelete
  5. ಆನಂದ ಅವರೇ,
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ಕಿಚಡಿ ತುಂಬಾ ಚೆನ್ನಾಗಿದೆ..
    ನಿಮ್ಮವ,
    ರಾಘು.

    ReplyDelete
  6. ಊರಿಂದ ಇವತ್ತು ಬಂದೆ. ಪ್ರತಿಕ್ರಿಯಿಸಲಾಗಿರಲಿಲ್ಲ.

    ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  7. ಆನಂದ್,
    ನೀವು ಏನು ಬರೆದ್ರೂ ಚೆನ್ನಾಗಿಯೇ ಇರ್ತದೆ ಅಂತ ಅನಿಸಿದೆ. ಇನ್ನು ಮುಂದೆ ಏನು ಬರೆದ್ರೂ ಹರ್ದು ಹಾಕೋ ವಿಚಾರ ಮಾತ್ರ ಮಾಡ್ಬೇಡಿ- ಅದನ್ನ ನಮಗೆ ಉಣಬಡಿಸಿ. ಹೊಸವರ್ಷ ನಮ್ಮೆಲ್ಲರಲ್ಲಿ ಹೊಸ ಕನಸುಗಳನ್ನು ಬಿತ್ತಲಿ.

    ReplyDelete
  8. ಸ್ವಾಗತ ನಾರಾಯಣ್ ಸರ್,
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಆದರೆ ಹರಿದು ಹಾಕುವಂಥ ಬರಹಗಳನ್ನು ಬರೆಯಬಾರದೆಂದು ಆಜ್ಞೆಯಾಗಿದೆ :)

    ReplyDelete
  9. "ಇಂದಿರೆಯ ಹತ್ಯೆಯಾಗಿ ಇಪ್ಪತ್ತೈದು ವರ್ಷ. ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ಕ್ರಿಕೆಟ್ ನಿಂದ ದುಡ್ಡು ಮಾಡಲು ಶುರುಮಾಡಿ ಇಪ್ಪತ್ತು ವರ್ಷ. ಮುಂಬಯಿಯ ನರಮೇಧಕ್ಕೂ ಆಗಲೇ ಒಂದು ವರ್ಷ. ಹಾಂ, ಮಹಾಪ್ರಳಯಕ್ಕಿನ್ನೆರಡೇ ವರ್ಷ!."

    - ಚೆನ್ನಾಗಿದೆ. ಹಿನ್ನೋಟ - ಮುನ್ನೋಟ ಎರಡಕ್ಕೂ ವರ್ಷ ಮಗಚುವಾಗ ಒಂದು ಅವಕಾಶ. ಅದು ಬದುಕಿನ ಹಾಳೆ ಮಗುಚಿದ ಹಾಗೆ ಇರುತ್ತದೆ. ಚೆನ್ನಾಗಿ ಬರೀತೀರಿ, ಮುಂದುವರಿಸಿ.

    ReplyDelete