ಭಾನುವಾರದ ಸಂಜೆ
ಭಾವನೆಗಳ ಸಂತೆ
ಮಾಡಲೇನೂ ಕೆಲಸವಿಲ್ಲದೆ
ಧೂಳೊರೆಸಲು ಕುಳಿತೆನಲ್ಲ
ಪುಟ್ಟದ್ಯಾವುದೋ ಅಂಗಿ
ಜಿರಲೆ ತಿಂದ ಜೇಬು
ಅಜ್ಜನಲ್ಲವೆ ಕೊಡಿಸಿದ್ದು?
ಇರಲಿ,
ನಾನಜ್ಜನಾಗುವವರೆಗೂ
ಇದು ಬದಿಯಲ್ಲಿರಲಿ
ಮಾಸಿದ ಫೋಟೋ
ಹಲ್ಲೊಂದುದಿರಿದ ಬಾಯಿ
ಜೊತೆಯಲ್ಲಿರುವುದಾರು?
ಅರೆ,
ನಿನ್ನೆ ತಾನೇ ಬಂದಿದ್ದನಲ್ಲ
ಇಲಿ ತಿಂದ ಪುಸ್ತಕ
ಅಪ್ಪ ಅಮ್ಮನ ಚಿತ್ರ!
ನನ್ನ ಮಗ ನನ್ನ
ಗೀಚುವವರೆಗೂ
ನನ್ನಮ್ಮನ ಪಾಲಿಗಿದಿರಲಿ
ಗಾಳಿ ಸೋರಿದ ಚೆಂಡು
ನೆನಪುಗಳ ದಂಡು
ಆಡಿದ ಪಂದ್ಯಗಳೆಲ್ಲವೂ
ಒಂದು ಬಾರಿ ರಿವೈಂಡು
ಇದ್ಯಾವುದು ಪ್ರಶಸ್ತಿಪತ್ರ
ನೃತ್ಯದಲ್ಲಿ ಸಮಾಧಾನ
ಒಮ್ಮೆ ನಾನೂ ನರ್ತಿಸಿದ್ದೆನಲ್ಲ
ಮನಸಿಗಷ್ಟೇ ಸಮಾಧಾನ
ಭಾನುವಾರದ ರಾತ್ರಿ
ನೆನಪುಗಳದೇ ಜಾತ್ರೆ
ಅರೆ,
ಧೂಳೊರೆಸುವುದೇ ಮರೆತೆನಲ್ಲ!
ಬಾಲ್ಯದ ನೆನೆಪುಗಳ ಮೆಲುಕು ಅದ್ಭುತವಾಗಿ ಮೂಡಿದೆ.
ReplyDeleteಚೆ೦ದದ ಕವನ ಆನ೦ದ.
ಆನಂದ್,
ReplyDeleteಕವನ ತುಂಬಾ ಚೆನ್ನಾಗಿದೆ. ಬಹುಶ ಎಲ್ಲರು ಈ ರೀತಿ ತಮ್ಮ ಹಳೆಯ ಘಟನೆಗಳನ್ನ ನೆನಪು ಮಾಡಿಕೊಳ್ತಾರೆ ಅನ್ನಿಸುತ್ತೆ.
ನೆನಪುಗಳ ಜಾತ್ರೆ ಚೆನ್ನಾಗಿದೆ.
ReplyDeleteNice one Anand
ReplyDeleteನೆನಪುಗಳ ಜಾತ್ರೆಯಲ್ಲಿ ಕಳೆದು ಹೋಗಿ ಧೂಳೊರೆಸಲು ಮರೆತು ಬಿಟ್ಟಿರಾ...? ಚೆ೦ದದ ಕವನ.. ಭಾವ...
ReplyDeleteಆನಂದ,
ReplyDeleteತುಂಬ ಸೊಗಸಾದ ಕವನ ಬರೆದಿರುವಿರಿ. ಅಭಿನಂದನೆಗಳು.
ಇಲ್ಲಿ ಹಾಕಿದ ಚಿತ್ರ ಸಹ ಸೊಗಸಾಗಿದೆ. ಅದರದೇ ಧೂಳು ಒರೆಸಲು ಹೋಗಿದ್ದಿರಾ ಹೇಗೆ?
ಕವನ ಮೆಚ್ಚಿದ ನಿಮಗೆಲ್ಲರಿಗೂ ಧನ್ಯವಾದಗಳು
ReplyDeleteಸುನಾಥ ಕಾಕಾ, ಊರಿಂದ ಅಪ್ಪ ಅಮ್ಮ ಬರ್ತೀವಿ ಅಂತ ಹೇಳಿದ್ರು...(Bachelor's room) ಮನೆ ಸ್ವಚ್ಛಗೊಳಿಸ್ತಿರಬೇಕಾದ್ರೆ ಇದು ಹೊಳೀತು :)
ಆನಂದ್,
ReplyDeleteನೆನಪುಗಳ ಕವನ ಸೊಗಸಾಗಿದೆ....
ನೆನಪುಗಳ ಜಾತ್ರೆ...ತು೦ಬಾ ಚೆನ್ನಾಗಿದೆಯಪ್ಪಾ...ನಿಮ್ಮ ಕಲ್ಪನೆ.. ಹೋಲಿಕೆ ಎರಡೂ...
ReplyDeleteಮನಸಿನ ಅಲೆಮಾರಿನಿ೦ದ ಇನ್ನಷ್ಟು ನೆನಪು ಹಾಗೂ ಕಲ್ಪನೆಗಳನ್ನು ರೀವೈ೦ಡ್ ಮಾಡಿ
ಬರೆಯಿರಿ... ಧನ್ಯವಾದಗಳು...
ಭಾನುವಾರದ ಸಂಜೆ
ReplyDeleteಭಾವನೆಗಳ ಸಂತೆ...
ಭಾನುವಾರದ ರಾತ್ರಿ
ನೆನಪುಗಳದೇ ಜಾತ್ರೆ...
Excellent Anand!!!
ಕವನ ತುಂಬಾ ಚೆನ್ನಾಗಿದೆ ಸರ್..
ReplyDeleteನಿಮ್ಮವ,
ರಾಘು.
ತುಂಬಾ ಚೆನ್ನಾಗಿದೆ ಸಾಲುಗಳು
ReplyDeleteಬಹಳ ಇಷ್ಟವಾಯಿತು
ನೆನಪು ತುಂಬಾ ಚೆನ್ನಾಗಿದೆ ...ಆ ಫೋಟೋದಲ್ಲಿರುವ ಚಿತ್ರ ಸೂಪರ್ ಮೂರುಮಕ್ಕಳಿಗೂ ಒಳ್ಳೆ ಹಲ್ಲುಗಳಿವೆ ಹಹಹಹ.....ಭಾನುವಾರ ಧೊಳು ಕೊಡವದಿದ್ದರೇನಂತೆ ಮುಂದಿನವಾರ ಬರುತ್ತೆ ಆಗ ಮಾಡಿದರಾಯಿತು ಹಹಹಹ ಚೆನ್ನಾಗಿದೆ...
ReplyDeleteಇಲಿ ತಿಂದ ಪುಸ್ತಕ
ReplyDeleteಅಪ್ಪ ಅಮ್ಮನ ಚಿತ್ರ!
ನನ್ನ ಮಗ ನನ್ನ
ಗೀಚುವವರೆಗೂ
ನನ್ನಮ್ಮನ ಪಾಲಿಗಿದಿರಲಿ
ಚೆಂದದ ಸಾಲು
Hey, nice... tumbaa chennag bareeteera......
ReplyDelete