Thursday, August 5, 2010

ಸಾಂತ್ವನ

ಹೂತು ಹೋದವು ಮಾತು
ಮರೆತೇ ಹೋಯಿತೆ ನಗು
ಎಲ್ಲಿಂದ ಇಳಿದಿದೀ‌ ಮೌನ
ಮನದ ಮೂಲೆಯೊಳಗೆ

ಬರಿದಾಗಿ ಹೋಯಿತೇ ಗಾಡಿ
ಕನಸು ಕೊಳ್ಳುವ ಮುನ್ನ
ಬರೆಯಲಾಗದ ಕವನ
ಹಾಕಿ ಒಯ್ದರೇ‌ ಕನ್ನ

ಮರೆಯಾಗದ ನೆನಪುಗಳು
ಮನದೊಳಗೆ ಮೆರೆದಿರಲು
ಉರುಟಿ ಹೋದ ಕನಸುಗಳು
ಮತ್ತೆ ಮತ್ತೆ ಮರಳಿರಲು
ಬಿಸಿ ಉಸಿರು, ಅಸಹನೆ
ತಾಳಲಾಗದ ತಪನೆ

ತಲ್ಲಣಿಸದಿರು ಗೆಳೆಯಾ
ಬೀಸುವುದು ತಂಗಾಳಿ.
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ
ಮತ್ತೆ ಮೂಡೀತು ಬೆಳಕು
ಕಾಲ ಸರಿದಂತೆ

15 comments:

  1. ಆನ೦ದ
    ನಿಜ ಕಹಿಯನ್ನು ಕಾಲವೇ ಮರೆಸುತ್ತದೆ..
    ಮತ್ತು ಕಹಿಯನ್ನು ಉ೦ಡವನು ಬದುಕಿನ ಸಿಹಿಯ ಮಹತ್ವವನ್ನು ತು೦ಬಾ ಚನ್ನಾಗಿ ಅರಿತುಕೊಳ್ಳುತ್ತಾನೆ.. ಅರ್ಥಪೂರ್ಣವಾಗಿ ಅನುಭವಿಸುತ್ತಾನೆ.
    ಸು೦ದರ ಸಾಲುಗಳು ಆಶಾವಾದದತ್ತ ಸಾಗಿವೆ..
    ವ೦ದನೆಗಳು.

    ReplyDelete
  2. ಒಳ್ಳೆಯ ಕವನ. ಮನಸಿಗೆ ಮುದನೀಡುವಂತಹುದ್ದು.

    ReplyDelete
  3. ಆನಂದ್,\
    ಸುಪೆರ್ಬ್
    ಬಹಳ ಇಷ್ಟವಾಯಿತು

    ReplyDelete
  4. ಕವನದ ಕೊನೆಗಿರುವ ಆಶಾಭಾವನೆ ತುಂಬ ಇಷ್ಟವಾಯಿತು.

    ReplyDelete
  5. ಕತ್ತಲಮನಕೆ ಬೆಳಕು ತೋರುವ ಕವನ..

    ReplyDelete
  6. ಭಾವಪೂರ್ಣ ಕವನ.... ಚೆನ್ನಾಗಿದೆ.

    ReplyDelete
  7. ಕತ್ತಲ ಮನೆಯವರಿಗೆ ಸ್ವಾಗತ.
    ಮೆಚ್ಚಿದ ನಿಮಗೆಲ್ಲರಿಗೂ‌ ಧನ್ಯವಾದಗಳು.

    ReplyDelete
  8. ಕಹಿಯಿಂದ ಸಿಹಿಯೆಡೆಗೆ ಪಯಣಕ್ಕೆ ತಮ್ಮ ಸಾಂತ್ವನ ದಾರೀದೀಪ. ಚೆನ್ನಾಗಿದೆ.

    ReplyDelete
  9. ಮರೆಯಾಗದ ನೆನಪುಗಳು
    ಮನದೊಳಗೆ ಮೆರೆದಿರಲು...

    Superb Anand!!

    ReplyDelete
  10. yaak sir full feel aagi bareduriva haagide...
    nice one...

    ReplyDelete
  11. bhavanegalinda tumbida kavana tumba chennagide sir :)

    ReplyDelete
  12. ಬೆಳಕಿನ ಕಡೆಗೆ ಪಯಣ..ನೈಸ್ ಕವನ..
    ನಿಮ್ಮವ,
    ರಾಘು.

    ReplyDelete
  13. ಆನಂದಾ !
    ಈ ನಿನ್ನ ಗೆಳೆಯನಿಗೆ ನೀಡಿದಂತಿದೆ ಕೊನೆಯ ಆಶಾಭಾವ.

    ತಲ್ಲಣಿಸದಿರು ಗೆಳೆಯಾ
    ಬೀಸುವುದು ತಂಗಾಳಿ.
    ಮತ್ತೆ ಮೂಡೀತು ಬೆಳಕು
    ಕಾಲ ಸರಿದಂತೆ.

    ಧನ್ಯವಾದಗಳು ..!
    ನಿನ್ನಿಂದ ಪಡೆದ ಈ ಸ್ಫೂರ್ತಿಯು ನನಗೆ,

    ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
    ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ

    ಆಗಲಿ..

    ReplyDelete