ಹೂತು ಹೋದವು ಮಾತು
ಮರೆತೇ ಹೋಯಿತೆ ನಗು
ಎಲ್ಲಿಂದ ಇಳಿದಿದೀ ಮೌನ
ಮನದ ಮೂಲೆಯೊಳಗೆ
ಬರಿದಾಗಿ ಹೋಯಿತೇ ಗಾಡಿ
ಕನಸು ಕೊಳ್ಳುವ ಮುನ್ನ
ಬರೆಯಲಾಗದ ಕವನ
ಹಾಕಿ ಒಯ್ದರೇ ಕನ್ನ
ಮರೆಯಾಗದ ನೆನಪುಗಳು
ಮನದೊಳಗೆ ಮೆರೆದಿರಲು
ಉರುಟಿ ಹೋದ ಕನಸುಗಳು
ಮತ್ತೆ ಮತ್ತೆ ಮರಳಿರಲು
ಬಿಸಿ ಉಸಿರು, ಅಸಹನೆ
ತಾಳಲಾಗದ ತಪನೆ
ತಲ್ಲಣಿಸದಿರು ಗೆಳೆಯಾ
ಬೀಸುವುದು ತಂಗಾಳಿ.
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ
ಮತ್ತೆ ಮೂಡೀತು ಬೆಳಕು
ಕಾಲ ಸರಿದಂತೆ
Thursday, August 5, 2010
Subscribe to:
Post Comments (Atom)

very nice kavana
ReplyDeleteಆನ೦ದ
ReplyDeleteನಿಜ ಕಹಿಯನ್ನು ಕಾಲವೇ ಮರೆಸುತ್ತದೆ..
ಮತ್ತು ಕಹಿಯನ್ನು ಉ೦ಡವನು ಬದುಕಿನ ಸಿಹಿಯ ಮಹತ್ವವನ್ನು ತು೦ಬಾ ಚನ್ನಾಗಿ ಅರಿತುಕೊಳ್ಳುತ್ತಾನೆ.. ಅರ್ಥಪೂರ್ಣವಾಗಿ ಅನುಭವಿಸುತ್ತಾನೆ.
ಸು೦ದರ ಸಾಲುಗಳು ಆಶಾವಾದದತ್ತ ಸಾಗಿವೆ..
ವ೦ದನೆಗಳು.
ಒಳ್ಳೆಯ ಕವನ. ಮನಸಿಗೆ ಮುದನೀಡುವಂತಹುದ್ದು.
ReplyDeleteಆನಂದ್,\
ReplyDeleteಸುಪೆರ್ಬ್
ಬಹಳ ಇಷ್ಟವಾಯಿತು
chendada kavana ishtavaayitu.
ReplyDeleteಕವನದ ಕೊನೆಗಿರುವ ಆಶಾಭಾವನೆ ತುಂಬ ಇಷ್ಟವಾಯಿತು.
ReplyDeleteಕತ್ತಲಮನಕೆ ಬೆಳಕು ತೋರುವ ಕವನ..
ReplyDeleteಭಾವಪೂರ್ಣ ಕವನ.... ಚೆನ್ನಾಗಿದೆ.
ReplyDeleteಕತ್ತಲ ಮನೆಯವರಿಗೆ ಸ್ವಾಗತ.
ReplyDeleteಮೆಚ್ಚಿದ ನಿಮಗೆಲ್ಲರಿಗೂ ಧನ್ಯವಾದಗಳು.
ಕಹಿಯಿಂದ ಸಿಹಿಯೆಡೆಗೆ ಪಯಣಕ್ಕೆ ತಮ್ಮ ಸಾಂತ್ವನ ದಾರೀದೀಪ. ಚೆನ್ನಾಗಿದೆ.
ReplyDeleteಮರೆಯಾಗದ ನೆನಪುಗಳು
ReplyDeleteಮನದೊಳಗೆ ಮೆರೆದಿರಲು...
Superb Anand!!
yaak sir full feel aagi bareduriva haagide...
ReplyDeletenice one...
bhavanegalinda tumbida kavana tumba chennagide sir :)
ReplyDeletevery nice
ReplyDeleteಬೆಳಕಿನ ಕಡೆಗೆ ಪಯಣ..ನೈಸ್ ಕವನ..
ReplyDeleteನಿಮ್ಮವ,
ರಾಘು.
ಸಾಂತ್ವನದ ಹಾದೀಲಿ
ReplyDeleteಬೆಳಕಿನ ಪಯಣ,
ತುಂಬಾ ಬಾವಪೂರ್ಣ
ಅರ್ಥಪೂರ್ಣ ಕವನ,
ಮನಸ್ಸಿಗೆ ಮುದ ನೀಡಿದ ನಿಮಗೆ
ನನ್ನ ಧನ್ಯವಾದಗಳನ್ನು ಅರ್ಪಿಸೋಣ.
ವಸಂತ್.
ಆನಂದಾ !
ReplyDeleteಈ ನಿನ್ನ ಗೆಳೆಯನಿಗೆ ನೀಡಿದಂತಿದೆ ಕೊನೆಯ ಆಶಾಭಾವ.
ತಲ್ಲಣಿಸದಿರು ಗೆಳೆಯಾ
ಬೀಸುವುದು ತಂಗಾಳಿ.
ಮತ್ತೆ ಮೂಡೀತು ಬೆಳಕು
ಕಾಲ ಸರಿದಂತೆ.
ಧನ್ಯವಾದಗಳು ..!
ನಿನ್ನಿಂದ ಪಡೆದ ಈ ಸ್ಫೂರ್ತಿಯು ನನಗೆ,
ಕಾಡ ಮಧ್ಯದಲಿ ಹುಣ್ಣಿಮೆ ಸುರಿದಂತೆ
ಸಂಜೆಗತ್ತಲಿನಲಿ ಸೋನೆಮಳೆ ಹಿಡಿದಂತೆ
ಆಗಲಿ..