ದೂರ ಹೋಗುವ ಮಾತನಾಡಿದಾಗ, ನೀವು ತೋರಿಸಿದ ಪ್ರೀತಿ, ಹಾರೈಕೆ, ಸಾಂತ್ವನಗಳಿಗೆ ಆಭಾರಿ. ಅವುಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಕ್ಷಮೆಯಿರಲಿ.
ಈಗ ಎಲ್ಲಾ ಒಂದು ಹಂತಕ್ಕೆ ಬಂದಂತಿದೆ. ಅಬ್ಬ, ಇಲ್ಲಿಗೆ ಎಲ್ಲಾ ಸರಿಹೋಯಿತು ಅನ್ನುವಷ್ಟರಲ್ಲಿ ಮತ್ತೇನಾದರೂ ಅನಾಹುತವಾಗುತ್ತಿತ್ತು. ಸಣ್ಣವನಿದ್ದಾಗ ಸಾವು ನೋವು ನೋಡಿದ್ದು ಬಿಟ್ಟರೆ, ಇಲ್ಲಿಯವರೆಗೂ ಆ ಸಂಕಟ ಮತ್ತೆ ಅನುಭವಿಸಿರಲಿಲ್ಲ. ಅದೂ ಮೇಲಿಂದ ಮೇಲೆ. ಕಳೆದ ಕೆಲವು ತಿಂಗಳುಗಳಲ್ಲಿ ಬದುಕು ಸಾಕಷ್ಟು ಪಾಠ ಕಲಿಸಿದೆ. ಒಂದೇ ಗುಕ್ಕಿನಲ್ಲಿ ಸಾವು, ನೋವು, ಸಂಭ್ರಮ ಸಂತೋಷ ಎಲ್ಲವನ್ನೂ ಅನುಭವಿಸಿದ್ದೇನೆ. ರಜೆ ಹಾಕಿದ್ದು ಸಾಕು ಅಂತ ಅನಿಸಿದರೂ, ಮನಸ್ಸಿಗಿನ್ನೂ ಸೂತಕ ಕಳೆದಿಲ್ಲ. ಮನೆ-ಆಫೀಸು ಅಂತ ಇಷ್ಟರಲ್ಲೇ ದಿನ ಕಳೆದು ಹೋಗುತ್ತಿದೆ. ನನಗಾಗಿ ಒಂದಿಷ್ಟು ಸಮಯ ಎತ್ತಿಟ್ಟುಕೊಳ್ಳಬೇಕೆನ್ನುವುದು ಕೇವಲ ಮಾತಲ್ಲೇ ಉಳಿದು ಹೋಗುತ್ತದೆಯೆನ್ನುವ ಭಯದಿಂದ ಇವತ್ತು ಮತ್ತೆ ಬರೆಯಲು ಕುಳಿತಿದ್ದೇನೆ.
ಒಪ್ಪಿಕೊಂಡ ಕೆಲಸಗಳು ಒಂದಿಷ್ಟು ಹಾಗೇ ಉಳಿದಿವೆ. ಒಂದೊಂದಾಗಿ ಎಲ್ಲವನ್ನೂ ಮುಗಿಸಬೇಕಾಗಿದೆ. ನಾನು ತಪ್ಪಿಸಿಕೊಂಡ ನಿಮ್ಮೆಲ್ಲರ ಬರಹಗಳನ್ನು ಓದಬೇಕು, ಈ ಮುಂಚೆ ಅರ್ಧಕ್ಕೇ ನಿಲ್ಲಿಸಿರುವ ಕಥೆಗಳಿಗೊಂದು ಅಂತ್ಯ ಕಾಣಿಸಬೇಕು. ರಜೆ ಹಾಕಿದ ಇಷ್ಟು ದಿನಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅವನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬರಹ ಲೋಕಕ್ಕೆ ಮತ್ತೆ ಮರಳಬೇಕು. ಹಾಗೆಂದು ನಿರ್ಧರಿಸಿದ್ದೇನೆ.
ಆನಂದ್ ಅವರೇ..
ReplyDeleteವಾಪಸ್ ಬಂದಿದ್ದು ತುಂಬಾ ಖುಷಿಯಾಯಿತು...
ಮನಸ್ಸಿನ ನೋವನ್ನು ಹಂಚಿ ನಮ್ಮಲಿ ಹಂಚಿಕೊಂಡರೆ ನಿಮ್ಮ ಮನಸ್ಸಿಗೆ ಸಮಾಧಾನ ಆಗಬಹುದು.
ಒಳ್ಳೆದಾಗಲಿ.
ನಿಮ್ಮವ,
ರಾಘು .
ಮರಳಿ ಬರುವ ಮನಸ್ಸು ಮಾಡಿರುವುದು ತುಂಬಾ ಸಂತಸದ ಸುದ್ದಿ.. ಬರಹ ಲೋಕ ನಿಮ್ಮ ಮನಸಿಗೆ ಇನ್ನಷ್ಟು ನೆಮ್ಮದಿಯನ್ನ ಕೊಡಲೆಂಬ ಚಿಕ್ಕ ಆಶಯ...welcome back..
ReplyDeleteನೀವು ಮರಳಿ ಬಂದಿದ್ದು ತುಂಬ ಖುಷಿ ತಂದಿದೆ...ನಿಮ್ಮ ಬರಹಕ್ಕಾಗಿ ಎದುರು ನೋಡುತ್ತಿರುತ್ತೇನೆ.
ReplyDeleteಆನಂದ,
ReplyDeleteಕಹಿ ಎಲ್ಲ ಕಳೆದು ಹೋಗಿ, ಸೊಗಸಿನ ದಿನಗಳು ಮತ್ತೆ ಪ್ರಾರಂಭವಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಬರಹಗಳನ್ನು ಎದರುನೋಡುತ್ತೇನೆ.
ಆನ೦ದ..
ReplyDeleteನಿಮ್ಮ ತೀರ್ಮಾನ ನಮಗೆಲ್ಲಾ ಆನ೦ದ ತ೦ದಿದೆ....!!!
welcome back Anand..
ReplyDeleteoLLeya teermana....nimage shubhavaagali
ReplyDeleteಹೃತ್ಪೂರ್ವಕ ಸ್ವಾಗತ.
ReplyDeleteನಿರ್ಧಾರ ಕಾರ್ಯರೂಪಕ್ಕೆ ಬರಲಿ :)
ReplyDeleteಬರೀರಿ..
ಮನಸ್ಸಿನ ನೋವು ಮನಸ್ಸಿನಿ೦ದ ಹೊರ ಹೋಗಿ ಲವಲವಿಕೆಯ ಸಮಯ ನಿಮ್ಮದಾಗಲಿ,ಮತ್ತೆ ಬರೆಯಿರಿ.
ReplyDeleteಆನಂದ ,
ReplyDeleteತುಂಬಾ ಸಂತೋಷ..
ನಿಮಗೆ ಮತ್ತೆ ಸ್ವಾಗತ..
ReplyDeleteಮತ್ತೆ ಬರೆಯಲು ಪ್ರಾರಂಭಿಸಿದ್ದು ಸಂತೋಷ.
ReplyDeleteಮನದ ಕ್ಲೇಷೆ ಕಳೆದುಕೊಂಡು ಮತ್ತೆ ಬರಹಕ್ಕೆ ಬಂದದ್ದು ಸಂತಸದ ವಿಷಯ!
ReplyDeleteನಿಮ್ಮ ಆಗಮನ ಸಂತಸ ತಂದಿದೆ
ReplyDeleteಬರಹಗಳಿಗೆ ಕಾಯುತ್ತಿದ್ದೇವೆ
Well commu....
ReplyDeletemy hearty welcome to you .
ReplyDeleteಒಂದು ಧಿಡೀರ್ ಪ್ರವಾಸ ಮಾಡಿದ್ದರಿಂದ ಈ ಮೊದಲೇ ಪ್ರತಿಕ್ರಿಯಿಸಲಾಗಲಿಲ್ಲ.
ReplyDeleteನಿಮ್ಮೆಲ್ಲರಿಗೂ ಧನ್ಯವಾದಗಳು.
welcome back sir :)
ReplyDeletetadavaagi noduttiruve
ReplyDelete