Wednesday, December 29, 2010

ಒಮ್ಮೊಮ್ಮೆ ಹೀಗೂ..




ಮನದಲ್ಲೊಂದು ಮುಸಲಧಾರೆ
ಮುಗಿಲ ತುಂಬೆಲ್ಲಾ ಮಳೆಬಿಲ್ಲು 
ನಾಡೊಳಗೆ ನಲಿವಿನ ನರ್ತನ
ಸಂತೃಪ್ತಿಯೊಂದು ಮಗುವಾದರೆ
ಹೆಸರು ಹುಡುಕುವುದು ಬಲು ಕಷ್ಟ

ಮೆತ್ತನೆ ಹಿಮದ ಮೇಲೆ
ಸುಳಿಗಾಳಿಯ ಚೆಲ್ಲಾಟ.
ಸಂತೋಷ ಗಾಳಿಯಲ್ಲಡಗಿದೆಯೋ
ನೋಡುವ ಕಣ್ಣೊಳಗಿದೆಯೋ
ಗುಪ್ತಗಾಮಿನಿಯಾಗಿ ಮನದಲ್ಲಿದೆಯೋ
ಜೀವಸೆಲೆಯಾಗೆ ಎದೆಯಲ್ಲಿದೆಯೋ

ಮೆದುವಾಗಿ ಹಿತವಾಗಿ
ತೆರೆಯಾಗಿ ಅಲೆ ಬೀಸಲು
ಮೈಮೇಲೆ ಬಿದ್ದದ್ದು ಹಿಮವೋ
ಬಾನಿಂದುದುರಿದ ಬೆಳಕೋ
ಏನೋ ತಿಳಿಯದಾಗಿದೆ

ಬೆಳಗಾಗಿದೆ, ಗರಿ ಮೂಡಿದೆ, ಮಜವಾಗಿದೆ

7 comments:

  1. ಮೈಮೇಲೆ ಬಿದ್ದದ್ದು ಹಿಮವೋ
    ಬಾನಿಂದುದುರಿದ ಬೆಳಕೋ
    nice lines..
    happy new year.

    ReplyDelete
  2. Very very very nice... tumba chennagide kavana.. prati saalu kooda chennagide..

    ReplyDelete
  3. ಸೊಗಸಾದ ಕವನ. ಇಷ್ಟವಾಯ್ತು.

    ReplyDelete
  4. ಓಹ್ ! ಚೆನ್ನಾಗಿದೆ.

    ReplyDelete