ಶಹರಿನ ಗಗನಚುಂಬಿ ಕಟ್ಟಡಗಳ
ಬೆಂಕಿ ಪಟ್ಟಣದಂಥ ಗೂಡೊಳಗೆ
ಕೂತು ಗಾಜಿನ ಕಿಟಕಿಯಿಂದ
ಆಚೆ ನೋಡುವಾಗಲೇ ಬಿಟ್ಟು ಬಂದ
ಊರ ಮೂಲೆಯ ಮರದ ಮೇಲೆ ಹತ್ತಿ
ಆಡಿದ್ದು ನೆನಪಾಗುವುದು.
ಇಲ್ಲಿ ಒಂಟಿ ಮರಗಳಿಲ್ಲ, ಕೊಳ್ಳಿ
ದೆವ್ವಗಳಿಲ್ಲ ಚೌಡಿ ಮಾರಿಗಳಂತೂ
ಹತ್ತಿರಕ್ಕೂ ಸುಳಿಯುವುದಿಲ್ಲ.
ಬೀಸುವ ಗಾಳಿಯ ತುಂಬಾ ಸೋರಿ
ಹೋದ ಕನವರಿಕೆಗಳು ಮೈಗಂಟಿ
ದಂತಾಗಿ ಬೆಚ್ಚಿ ಬೀಳಬೇಕು.
uff..! sathya...good .
ReplyDeleteಆನಂದ,
ReplyDeleteತುಂಬ ಚೆನ್ನಾಗಿದೆ.
ಚೆನ್ನಾಗಿದೆ!!!!!
ReplyDeleteಚೆನ್ನಾಗಿದೆ !ಶುಭಾಶಯಗಳು
ReplyDelete”ಬೀಸುವ ಗಾಳಿಯ ತುಂಬಾ ಸೋರಿ
ReplyDeleteಹೋದ ಕನವರಿಕೆಗಳು ಮೈಗಂಟಿ
ದಂತಾಗಿ ಬೆಚ್ಚಿ ಬೀಳಬೇಕು.”
ಇಷ್ಟ ಆಯ್ತು...!
gud 1. ishta aaytu.
ReplyDeleteಬೀಸುವ ಗಾಳಿಯ ತುಂಬಾ ಸೋರಿ
ಹೋದ ಕನವರಿಕೆಗಳು ಮೈಗಂಟಿ waw
ಕೊನೆಯ ಸಾಲಿನಿಂದ ವಿಷಾದದ ಛಾಯೆ ಆವರಿಸಿದರೂ "ಊರ ಮೂಲೆಯ ಮರದ ಮೇಲೆ ಹತ್ತಿ ಆಡಿದ್ದು ನೆನಪಾಗುವುದು" ಖುಷಿ ನೀಡುತ್ತಿದೆ.
ReplyDelete- ಆನಂದ..,
ReplyDeleteಚಂದದ ಸಾಲುಗಳು..
ಒಳ್ಳೆಯ ಕವನ
ReplyDelete"ಬೆಂಕಿ ಪಟ್ಟಣದಂಥ ಗೂಡೊಳಗೆ" How true in this SE's life :D
ReplyDelete