ಮನದಲ್ಲೊಂದು ಮುಸಲಧಾರೆ
ಮುಗಿಲ ತುಂಬೆಲ್ಲಾ ಮಳೆಬಿಲ್ಲು
ನಾಡೊಳಗೆ ನಲಿವಿನ ನರ್ತನ
ಸಂತೃಪ್ತಿಯೊಂದು ಮಗುವಾದರೆ
ಹೆಸರು ಹುಡುಕುವುದು ಬಲು ಕಷ್ಟ
ಮೆತ್ತನೆ ಹಿಮದ ಮೇಲೆ
ಸುಳಿಗಾಳಿಯ ಚೆಲ್ಲಾಟ.
ಸಂತೋಷ ಗಾಳಿಯಲ್ಲಡಗಿದೆಯೋ
ನೋಡುವ ಕಣ್ಣೊಳಗಿದೆಯೋ
ಗುಪ್ತಗಾಮಿನಿಯಾಗಿ ಮನದಲ್ಲಿದೆಯೋ
ಜೀವಸೆಲೆಯಾಗೆ ಎದೆಯಲ್ಲಿದೆಯೋ
ತೆರೆಯಾಗಿ ಅಲೆ ಬೀಸಲು
ಮೈಮೇಲೆ ಬಿದ್ದದ್ದು ಹಿಮವೋ
ಬಾನಿಂದುದುರಿದ ಬೆಳಕೋ
ಏನೋ ತಿಳಿಯದಾಗಿದೆ
ಬೆಳಗಾಗಿದೆ, ಗರಿ ಮೂಡಿದೆ, ಮಜವಾಗಿದೆ
ಮೈಮೇಲೆ ಬಿದ್ದದ್ದು ಹಿಮವೋ
ReplyDeleteಬಾನಿಂದುದುರಿದ ಬೆಳಕೋ
nice lines..
happy new year.
Very very very nice... tumba chennagide kavana.. prati saalu kooda chennagide..
ReplyDeleteಸೊಗಸಾದ ಕವನ. ಇಷ್ಟವಾಯ್ತು.
ReplyDeleteliked ur blog
ReplyDeleteಓಹ್ ! ಚೆನ್ನಾಗಿದೆ.
ReplyDeleteಸೊಗಸಾಗಿದೆ..
ReplyDeleteThanx!
ReplyDelete