Friday, February 26, 2010

ದೂರ ಹೋಗುವ ಮುನ್ನ

ಇತ್ತ ಕಡೆ ತಲೆ ಹಾಕಿ ಬಹಳ ದಿನಗಳಾಗಿದ್ದವು. ಬರವಣಿಗೆ ಶುರು ಮಾಡಿದಾಗ ನಿರಂತರವಾಗಿ ಸಾಗುತ್ತದೆಂದುಕೊಂಡಿದ್ದೆ. ಆದರೆ ಈ ನಡುವೆ ಅನಿವಾರ್ಯ ಕಾರಣದಿಂದಾಗಿ ಅಂತರ್ಜಾಲದಿಂದಲೇ ದೂರವಾಗಿದ್ದೇನೆ. ಒಂದಾದ ಮೇಲೊಂದು ಅಹಿತಕರ ಘಟನೆಗಳು ನಡೆಯುತ್ತಿವೆ. ದೇಹಕ್ಕಿಂತಾ ಮನಸ್ಸಿಗೆ ಹೆಚ್ಚು ದಣಿವಾಗಿದೆ. ಸದ್ಯಕ್ಕಂತೂ ಬರವಣಿಗೆ ದೂರದ ಮಾತು. ರಜೆ ಹಾಕುವ ಮುನ್ನ ನಿಮಗೊಮ್ಮೆ ಹೇಳಬೇಕೆನಿಸಿತು.
ಮನಸ್ಸು ತಿಳಿಯಾದ ಮೇಲೆ ಮತ್ತೆ ಸಿಗುತ್ತೇನೆ.

ವಂದನೆಗಳು.

23 comments:

  1. ಆನಂದ್ ಸರ್ ,
    ಜೀವನದಲ್ಲಿ ಆಗುಹೋಗುಗಳು ಎದುರಾಗ್ತವೆ .. ಎಲ್ಲವನ್ನೂ ಎದುರಿಸೋ ಸ್ಥರ್ಯ ನಿಮದಾಗಲಿ .. ಮನಸ್ಸನ್ನ ತಿಳಿಯಾಗಿಸಿಕೊಂಡು ಮತ್ತೆ ಬನ್ನಿ ..
    ಗುಡ್ ಲಕ್ ..

    ReplyDelete
  2. ಆನಂದ್,
    ಜೀವನದಲ್ಲಿ ಇದೆಲ್ಲ ಇದ್ದದ್ದೇ,
    ಬರೆಯುವುದನ್ನು ನಿಲ್ಲಿಸಬೇಡಿ, ಬರಹ ದೇಹದ ನೋವಿಗೆ ಒಳ್ಳೆಯ ಔಷಧ

    ReplyDelete
  3. ಆನಂದ್..
    ಎಲ್ಲದಕ್ಕೂ ಪರಿಹಾರವಿದೆ, ಅದು ನಾವು ಕಂಡುಕೊಳ್ಳುವುದರಲ್ಲೇ ಇದೆ. ಹಿತಕರವಲ್ಲದ
    ಘಟನೆಗಳು ಮನಸ್ಸನ್ನು ಕಟ್ಟಿಹಾಕುತ್ತವೆ. Take rest. Refresh your mind and come back....ಎಲ್ಲಾ ಒಳ್ಳೆಯದಾಗಲಿ.

    ReplyDelete
  4. ತುಂಬಾ ದಿನದಿಂದ ನೀವು ಏನೂ ಬರೆದಿಲ್ಲರಿದುವುದನ್ನು ಗಮನಿಸಿದ್ದೆ . ನಿಮ್ಮ ಮನ ಆದಷ್ಟುಬೇಗ ತಿಳಿಯಾಗಲಿ . ಮತ್ತೆ ಬನ್ನಿ.

    ReplyDelete
  5. ಬರೆಯುತ್ತಾ ಇರಿ. ಮನದ ಮತ್ತು ದೇಹದ ದಣಿವೆಗೆ ಇದೇ ಮದ್ದು. ತಾವೂ ಎಲ್ಲ ಒತ್ತಡಗಳನ್ನು ಮೆಟ್ಟಿ ಬೇಗ ಬರೆಯುವ೦ತಾಗಲಿ ಎ೦ದು ಹಾರೈಸುತ್ತೆವೆ. ಅಹಿತಕರ ಘಟನೆಗಳು ನಿಮ್ಮ ಪರೀಕ್ಷಾಸಮಯವೆ೦ದುಕೊಳ್ಳಿ ಮಿತ್ರರ ಹಿರಿಯರ ಮಾರ್ಗದರ್ಶನ್ ಪಡೆದು ಮು೦ದುವರೆಯಿರಿ. ಮನಸ್ಸನ್ನು ದಣಿಯಗೊಡಬೇಡಿ. ತಮಗೆ ಮನೋಕ್ಲೇಷೆ ದೂರಾಗಲೆ೦ದು ಹಾರೈಸುವೆ.

    ReplyDelete
  6. 'ಆನಂದ' ಅವ್ರೆ..,

    ನಂಗು ಹೀಗೆ ಅನಿಸಿ ದೂರವಿದ್ದೆ..
    ಈಗ ಮತ್ತೆ ಬಂದಿದ್ದೇನೆ.. ಆದಷ್ಟು ಬೇಗ ಬನ್ನಿ.
    ...

    Blog is Updated:http://manasinamane.blogspot.com

    ReplyDelete
  7. ಜೀವನದಲ್ಲಿ ಗುದ್ದಾಟಗಳು ಇದ್ದೇ ಇರುತ್ತವೆ. ಎಲ್ಲವನ್ನೂ ನಿವಾರಿಸಿಕೊಂಡು ಬೇಗನೇ ಮರಳಿರಿ.

    ReplyDelete
  8. ಸಮಯವೇ ಎಲ್ಲದಕ್ಕೂ ಔಷಧಿ ಎನ್ನುತ್ತಾರೆ.ಸ್ವಲ್ಪ ಸಮಯದ ನ೦ತರ ಎಲ್ಲವೂ ಸರಿಯಾಗುತ್ತದೆ.ಧೈರ್ಯ ಹಾಗೂ ತಾಳ್ಮೆಗಳನ್ನಿಟ್ಟುಕೊ೦ಡು ನಿಮ್ಮ ನೋವುಗಳನ್ನು ನಿವಾರಿಸಿಕೊ೦ಡು ಬೇಗನೆ ಮರಳಿ ಬನ್ನಿ.

    ReplyDelete
  9. ಬೇಸರಬೇಡ, ನಿಮ್ಮ ಸಮಸ್ಯೆಗಳೆಲ್ಲವಕ್ಕೂ ಪರಿಹಾರ ಇದೆ, ಸಮಸ್ಯೆಗಳೆಲ್ಲ ಸ್ವಲ್ಪಕಾಲ ನಮಗೆ ಟೆಸ್ಟ್ ಅಷ್ಟೇ , ಆಮೇಲೆ ಮತ್ತೆ ಮಾಮೂಲು! ಸಮಸ್ಯೆಗಳನ್ನು ಕಂಡಷ್ಟೂ ಮನಸ್ಸು ಹರಿತವಾಗುತ್ತದೆ;ಪಕ್ವವಾಗುತ್ತದೆ, ನಿಮ್ಮ ಸಮಯೆಗಳು ಶೀಘ್ರ ಹಾರಿಹೋಗಲಿ ಎಂದು ಮನದುಂಬಿ ಹಾರೈಸುತ್ತೇನೆ!

    ReplyDelete
  10. ಆನಂದ್ ಸರ್,
    ಎಲ್ಲ ಆಗುವುದು ಒಳ್ಳೆಯದಕ್ಕೆ ಅಂತಾರೆ... ಆದ್ರೆ ಹೇಳುವುದು ಸುಲಭ, ಅನುಭವಿಸುವುದು ಕಷ್ಟ ..... ಕಷ್ಟ ಬಂದಾಗ, ಅದನ್ನೊಮ್ಮೆ ಲಘುವಾಗಿ, ತಮಾಷೆಯ ದ್ರಷ್ಟಿಯಿಂದ ನೋಡಿ... ನಿಮಗೆ ನಗು ಬರತ್ತೆ..... ಪ್ರಕಾಶಣ್ಣ, ಸುನಾಥ್ ಸರ್, ಶಿವೂ ಸರ್ ಜೊತೆ ಮಾತಾಡಿ....... ನಿಮ್ಮ ನೋವನ್ನೇ ನಮ್ಮ ಜೊತೆ ಬರೆದು ಹಂಚಿಕೊಳ್ಳಿ....... ನಮ್ಮ ಕಡೆ ಒಂದು ಮಾತಿದೆ...... ''ಕಷ್ಟ ಮನುಷ್ಯನಿಗೆ ಬರದೆ, ಮರಕ್ಕೆ ಬರುತ್ತದಾ '' ಅಂತ...... .. ಬೇಗ ನೋವಿನಿಂದ ಹೊರಬಂದು..... ಒಳ್ಳೆಯ ಕವನ ಬರೆಯಿರಿ....... ಕಾಯುತ್ತಿದ್ದೇವೆ,.......

    ReplyDelete
  11. ಬರಹ ಮನದ ನೋವನ್ನು ದೂರ ಮಾಡುತ್ತೆ...
    ಬರೆಯುವುದನ್ನು ನಿಲ್ಲಿಸಬೇಡಿ....
    ನಿಮ್ಮ ಮನ ಆದಷ್ಟು ಬೇಗ ತಿಳಿಯಾಗಲಿ ....
    ಬೇಗ ಬನ್ನಿ.... ಬರೆಯಿರಿ...

    ReplyDelete
  12. novu yaarigilla heLi...ellavannu maresalu baravanige spoortiyaagali. bega maraLi banni

    ReplyDelete
  13. aadashtu bega marali banni.. kaayuttirutteve...

    ReplyDelete
  14. ನಿಮಗೆ ಶುಭವಾಗಲಿ.

    ReplyDelete
  15. ella ollayadaagali endu prartisuve..aadastu bega marali banni..kayutirutteve..take care :)

    ReplyDelete
  16. ಅದು ಹೇಗೆ ನಮ್ಮನ್ನೆಲ್ಲ ದೂರ ಮಾಡಿದಿರಿ? ಬೇಗ ಮರಳಿ ಬನ್ನಿ.

    ReplyDelete
  17. ಆನಂದ ಅವರೇ..ಮತ್ತೆ ಬನ್ನಿ..ಬ್ಲಾಗ್ ದುನಿಯಾದ ಸ್ನೇಹಿತರು ಕಾಯುತ್ತಿದ್ದಾರೆ..
    ನಿಮ್ಮವ,
    ರಾಘು.

    ReplyDelete
  18. ಆನಂದ ಅವರೇ..ಮತ್ತೆ ಬನ್ನಿ..ಬ್ಲಾಗ್ ದುನಿಯಾದ ಸ್ನೇಹಿತರು ಕಾಯುತ್ತಿದ್ದಾರೆ..
    ನಿಮ್ಮವ,
    ರಾಘು.

    ReplyDelete
  19. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete
  20. Anand best of luck..nimma manada dugudagalu bega doodravaagi nammondige mattomme nagu nagutaa blogisuvantaagali..

    ReplyDelete
  21. ಆನಂದ್ ಸರ್ ನಿಮ್ಮ ಬ್ಲಾಗ್ ಓದುವವರಲ್ಲಿ ನಾನು ಹೊಸಬ. ಕವಿತೆ ಹುಟ್ಟದ ರಾತ್ರಿ ತುಂಬಾ ಚನ್ನಾಗಿದೆ. ಆದರೆ ನಂತರದ ನಿಮ್ಮ ಬರಹದಲ್ಲಿ ನೋವು ತುಂಬಿದೆ. ಮೇಲಿಂದ ಮೇಲೆ ಬಂದ ಅಘಾತಗಳೆಲ್ಲ ಬೇಗ ಮರೆಯಾಗಿ ಕವಿತೆಗಳು ಹುಟ್ಟಲಿ. ಆಶಿಸುತ್ತೇನೆ.

    ReplyDelete